ಬಕೆಟ್ ಹಿಡಿದು ಮಂತ್ರಿಯಾಗುವ ಅವಶ್ಯಕತೆ ನನಗೆ ಇಲ್ಲ- ಶಾಸಕ ರಾಜೂಗೌಡ ಕಿಡಿ

ಬೆಂಗಳೂರು,ಆಗಸ್ಟ್,4,2021(www.justkannada.in): ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆ ಅಸಮಾಧಾನಗೊಂಡಿರುವ ಶಾಸಕ ರಾಜುಗೌಡ , ಬಕೆಟ್ ಹಿಡಿದು ಮಂತ್ರಿಯಾಗುವ ಅವಶ್ಯಕತೆ ನನಗೆ ಇಲ್ಲ ಎಂದು ಕಿಡಿಕಾರಿದ್ದಾರೆ.

ಶಾಸಕ ರಾಜುಗೌಡರಿಗೆ ಸಚಿವ ಸ್ಥಾನ ಸಿಗದ ಹಿನ್ನೆಲೆ ಬೆಂಬಲಿಗರು ಪ್ರತಿಭಟನೆ ನಡೆಸಿ ಸಿಎಂ ಬೊಮ್ಮಾಯಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂತ್ರಿಗಿರಿ ಸಿಗದ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ರಾಜೂಗೌಡ, ಭಿಕ್ಷೆ ಬೇಡಿ ಸಚಿವನಾಗುವ ಸ್ಥಿತಿ ನನಗೆ ಬಂದಿಲ್ಲ. ಸಚಿವನಾಗಲು ಲಾಯಕ್ಕಿಲ್ಲ ಎನ್ನಲು ಕಾರಣ ಬೇಕಲ್ವಾ..? ಮುಂದೆ ಮಂತ್ರಿ ಸ್ಥಾನ ಕೊಟ್ಟರೂ ನನಗೆ ಬೇಡ ಎಂದು ತಿಳಿಸಿದ್ಧಾರೆ.

ನಾಲ್ಕು ಸ್ಥಾನ ಖಾಲಿ ಇದೆ ಮುಂದೆ ಮಂತ್ರಿ ಮಾಡ್ತೀವಿ ಅಂದಿದ್ರು. ಈಗ ಸಿಎಂ ಮುಂದೆ ಗಂಡು ಮಗನಂತೆ ಮಾತನಾಡಿ ಬಂದಿದ್ದೇನೆ. ಮಂತ್ರಿ ಸ್ಥಾನ ಕೊಟ್ಟರು ಬೇಡ ಎಂದು ಹೇಳಿ ಬಂದಿದ್ದೇನೆ ಎಂದು ರಾಜುಗೌಡ ತಿಳಿಸಿದರು.

Key words:  minister-position- MLA -Raju Gowda -outraged.