ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ IPL ಮ್ಯಾಚ್ ಬಗ್ಗೆ ಸಂಪುಟ ಸಭೆಯಲ್ಲಿ ನಿರ್ಧಾರ-ಗೃಹ ಸಚಿವ ಪರಮೇಶ್ವರ್

ಬೆಂಗಳೂರು,ಫೆಬ್ರವರಿ,12,2026 (www.justkannada.in):  ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಮ್ಯಾಚ್ ಆಡಿಸುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ನಂತರ ನಿರ್ಧಾರ ಪ್ರಕಟಿಸುತ್ತೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.

ಇಂದು ಆರ್ ಸಿಬಿ ಮತ್ತು ಕೆಎಸ್ ಸಿಎ ಜೊತೆ ಸಭೆ ನಡೆಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್,  ನ್ಯಾ ಕುನ್ಹಾ ವರದಿ ಅಂಶಗಳ ಬಗ್ಗೆ ಕ್ರಮಕ್ಕೆ ಸೂಚನೆ ನೀಡಿದ್ದವು. ಇಂದಿನ ಸಭೆಯಲ್ಲಿ ಸಾಧಕ ಭಾದಕಗಳ ಬಗ್ಗೆ ಚರ್ಚೆ ಮಾಡಿದ್ದೇವೆ.  ಎಲ್ಲ ಜವಾಬ್ದಾರಿ ಆರ್ ಸಿಬಿ ಕೆಎಸ್ ಸಿಎಅವರದ್ದೇ.

ಐಪಿಎಲ್ ಆರಂಭ ವಾಗುತ್ತಿದೆ.  ಈ ಹಿಂದೆ ಆರ್ ಸಿಬಿ ಟ್ರೋಫಿ ಗೆದ್ದಿದೆ.  ಹೋಂ ಗ್ರೌಂಡ್ ಉದ್ಘಾಟನೆ ಪಂದ್ಯವಾಡಲು ಕೇಳಿದರು.  ನನ್ನ ನೇತೃತ್ವದಲ್ಲಿ ಎಲ್ಲಾ ಚರ್ಚೆ ಮಾಡಿದ್ದೇವೆ.  ಸಭೆಯಲ್ಲಿ ಚರ್ಚೆಯಾದ ವಿಷಯವನ್ನು ಕ್ಯಾಬಿನೆಟ್ ಗೆ ತಿಳಿಸುತ್ತೇವೆ. ಸಂಪುಟ ಸಭೆಯು ಮುಂದಿನ ತೀರ್ಮಾನ ಮಾಡುತ್ತದೆ ಸಂಪುಟ ತೀರ್ಮಾನ ಬಳಿಕ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮ್ಯಾಚ್ ಆಡಿಸುವ ಬಗ್ಗೆ ಪ್ರಕಟಿಸುತ್ತೇವೆ ಎಂದು ಪರಮೇಶ್ವರ್ ತಿಳಿಸಿದರು.

Key words: Cabinet meeting, IPL match, Chinnaswamy Stadium, Minister Parameshwar