ಬೆಂಗಳೂರು,ಫೆಬ್ರವರಿ,10,2026 (www.justkannada.in): ಡಿಸಿಎಂ ಡಿಕೆ ಶಿವಕುಮಾರ್ ದೆಹಲಿ ಪ್ರವಾಸ ಕೈಗೊಂಡಿರುವ ಬಗ್ಗೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮಾತನಾಡಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಡಿಕೆ ಶಿವಕುಮಾರ್ ದೆಹಲಿಗೆ ಹೋಗಬಾರದಾ? ಅವರಿಗೆ ಅವರವರ ಸಭೆ ಇರುತ್ತೆ. ಸಿಎಂ ವಿಚಾರವನ್ನು ಬಿಟ್ಟು ಬೇರೆ ಏನಾದರೂ ಕೇಳಲು ಶುರು ಮಾಡಿ ಎಂದು ಮಾಧ್ಯಮದವರಿಗೆ ಚಾಟಿ ಬೀಸಿದರು.
ಡಿಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರು ಅವರು ದೊಡ್ಡ ಇಲಾಖೆ ವಹಿಸಿಕೊಂಡಿದ್ದಾರೆ. ಹಾಗಾಗಿ ಡಿಕೆ ಶಿವಕುಮಾರ್ ದೆಹಲಿಗೆ ಹೋಗ್ತಾರೆ ಎಂದರು.
ಗೊಂದಲ ಬಗೆಹರಿಸುವಂತೆ ಶಾಸಕರು ಸಚಿವರ ಒತ್ತಡ ವಿಚಾರ. ಇದನ್ನೆಲ್ಲಾ ಬಿಟ್ಟು ಬೇರೆ ಏನಾದರೂ ವಿಚಾರ ಕೇಳಿ ಎಂದು ಪರಮೇಶ್ವರ್ ತಿಳಿಸಿದರು.
Key words: DCM, DK Shivakumar, Delhi, visit, Home Minister, Parameshwar







