ರಾಜೀವ್ ಗೌಡನನ್ನ ಹಿಡಿದೇ ಹಿಡಿಯುತ್ತೀವಿ- ಗೃಹ ಸಚಿವ ಪರಮೇಶ್ವರ್

ಬೆಂಗಳೂರು,ಜನವರಿ,26,2026 (www.justkannada.in):  ಪೌರಾಯುಕ್ತೆ ಅಮೃತಾಗೌಡರಿಗೆ ಜೀವ ಬೆದರಿಕೆ ಹಾಕಿದ್ದ  ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಬಂಧನಕ್ಕೆ ವಿಳಂಬವಾಗುತ್ತಿರುವ ಕುರಿತು ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ರಾಜೀವ್ ಗೌಡನನ್ನು ಹಿಡಿದೇ ಹಿಡಿಯುತ್ತೇವೆ. ಸವಾಲೇನು ಇಲ್ಲ. ರಾಜೀವ್ ಗೌಡ  ಎಷ್ಟು ದಿನ ತಪ್ಪಿಸಿಕೊಂಡು ಹೋಗೋಕೆ ಆಗುತ್ತೆ.  ಅವರೇನು ಇಲ್ಲೇ ಮನೆಯಲ್ಲಿ ಇದ್ದಾರಾ ಹಿಡಿದುಕೊಂಡು ಬರೋಕೆ    ಒಂದೊಂದು ಕೇಸ್ ಗಳಿಗೆ ಅದಕ್ಕೆ ಆದ ಆಯಾಮಗಳು ಇರುತ್ತವೆ ಎಂದರು.

ಮೈಸೂರು ಜಿಲ್ಲೆ ಹೂಣಸೂರು ಪಟ್ಟಣದಲ್ಲಿ ದುಷ್ಕರ್ಮಿಗಳು ದರೋಡೆ ಮಾಡಿದ್ದರು.  ದರೋಡೆಕೋರರನ್ನ ಬಂಧಿಸಿಲು ಸಮಯ ಕೊಡಿ ಅಂದೆ.  ಈಗ ಹಿಡಿದುಕೊಡು ಬಂದ್ರು ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತಾರೆ. ಅವರು ಕಳ್ಳತನ ಮಾಡಿರುವುದರಲ್ಲಿ ಅರ್ಧ ಸಿಕ್ಕಿದೆ ಇನ್ನೂ ಉಳಿದ ಚಿನ್ನಭರಣಗಳನ್ನ ಮಾರಾಟ ಮಾಡಿಕೊಂಡಿದ್ದಾರೆ . ಕೆಲವು ಆರೋಪಿಗಳು ನೇಪಾಳಕ್ಕೆ ಹೋಗಿದ್ದಾರೆ ಅನ್ನುವ ಸುದ್ದಿ ಇದೆ. ಅನೇಕ ವಿಷಯಗಳು ನನಗೆ  ಗೊತ್ತಿದೆ ಈಗ ಹೇಳಲ್ಲ ಎಂದು ಪರಮೇಶ್ವರ್ ತಿಳಿಸಿದರು.

Key words: definitely, catch, Rajiv Gowda, Home Minister, Parameshwar