ಬೆಂಗಳೂರು,ಡಿಸೆಂಬರ್,3,2025 (www.justkannada.in): ಬ್ರೇಕ್ ಫಾಸ್ಟ್ ಮೀಟಿಂಗ್ ನಲ್ಲಿ ಏನು ಚರ್ಚೆಯಾಯಿತು. ಏನು ಮಾತನಾಡಿದರು ಎಂದು ಗೊತ್ತಿಲ್ಲ. ಈಗ ಎಲ್ಲವೂ ತಿಳಿಯಾಯಿತು ಅಂದುಕೊಂಡಿದ್ದೇನೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಒಳಗಡೆ ಏನು ಚರ್ಚೆ ಮಾಡಿದ್ದಾರೆ ಎಂದು ಗೊತ್ತಿಲ್ಲ. ಎಲ್ಲವೂ ತಿಳಿಯಾಯಿತು ಅಂದು ಕೊಂಡಿದ್ದೇನೆ. ಅನೇಕ ಸಮಸ್ಯೆಗಳ ಬಗ್ಗೆ ಅಧಿವೇಶನದಲ್ಲಿ ಚರ್ಚೆ ನಡೆಯುತ್ತದೆ. ವಿಪಕ್ಷಗಳನ್ನ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತೇವೆ ಎಂದರು.
ಮಂಗಳೂರಿನಲ್ಲಿ ನಾರಾಯಣಗುರು ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಸಿಎಂ ನನ್ನನ್ನು ಕರೆದಿದ್ದಾರೆ ಹೀಗಾಗಿ ಹೋಗುತ್ತಿದ್ದೇವೆ .ಮಂಗಳೂರು ಕಾರ್ಯಕ್ರಮಕ್ಕೆ ನಾನೂ ಹೋಗುತ್ತಿದ್ದೇನೆ ಎಂದರು.
Key words: Breakfast meeting, Minister, Parameshwar







