ಒಳಮೀಸಲಾತಿ ಆದೇಶ ರದ್ದಿಗೆ ಹುನ್ನಾರ ಆರೋಪ: ಸಂಸದ ಕಾರಜೋಳಗೆ ಸಚಿವ ಪರಮೇಶ್ವರ್ ತಿರುಗೇಟು

ಬೆಂಗಳೂರು,ಅಕ್ಟೋಬರ್,31,2025 (www.justkannada.in): ಕಾಂಗ್ರೆಸ್ ಸರ್ಕಾರ  ಒಳ ಮೀಸಲಾತಿ ರದ್ದು ಮಾಡುವ ದುರುದ್ದೇಶ ಹೊಂದಿದೆ ಎಂದು ಆರೋಪಿಸಿದ ಬಿಜೆಪಿ ಸಂಸದ ಗೋವಿಂದ ಕಾರಜೋಳ ಅವರಿಗೆ ಗೃಹ ಸಚಿವ ಪರಮೇಶ್ವರ್ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಗೃಹ ಸಚಿವ ಪರಮೇಶ್ವರ್,  ಗೋವಿಂದ ಕಾರಜೋಳ ಒಳಮೀಸಲಾತಿ ಬಗ್ಗೆ ಸರಿಯಾಗಿ ಅರ್ಥೈಸಿಕೊಂಡಿಲ್ಲ. ಅವರ ಕಾಲದಲ್ಲಿ ಮಾಡಿದ್ದ ಗೊಂದಲವನ್ನ ನಾವು ನಿವಾರಿಸಿದ್ದೇವೆ ಎಂದರು.

ಎಬಿಸಿ ಪ್ರಕಾರ ಸುಗ್ರೀವಾಜ್ಞೆ ತರಬೇಕು ಅಂತಾ ತೀರ್ಮಾನ ಮಾಡಿದ್ದವು. ಸಚಿವ ಸಂಪುಟ ಸಭೆಯಲ್ಲಿ ಸುಗ್ರೀವಾಜ್ಞೆ ಬೇಡ ಬಿಲ್ ತರಲು ನಿರ್ಧಾರ ಮಾಡಲಾಗಿದೆ. ಚಳಿಗಾಲದ ಅಧಿವೇಶನದಲ್ಲಿ ಬಿಲ್ ತರಲು ನಿರ್ಧಾರ ಮಾಡಲಾಗಿದೆ.  ಕಾಯ್ದೆ ಮೂಲಕ ಕಾನೂನಿಗೆ ಶಕ್ತಿಕೊಡಬೇಕು ಎಂದು ಪರಮೇಶ್ವರ್ ತಿಳಿಸಿದರು.

Key words: Minister, Parameshwara, MP, Govind Karajola, internal reservation