ಬೆಂಗಳೂರು,ಅಕ್ಟೋಬರ್,9,2025 (www.justkannada.in): ಸಚಿವ ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ಔತಣ ಕೂಟ ಏರ್ಪಡಿಸಲಾಗಿದೆ ಎನ್ನುವುದನ್ನ ನಾನು ಒಪ್ಪುವುದಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಸಚಿವ ಸಂಪುಟ ಪುನಾರಚನೆ ಆಗುತ್ತದೆ ಎಂದು ಯಾರು ಹೇಳಿದ್ದಾರೆ ಗೊತ್ತಿಲ್ಲ. ಯಾವಾಗ ಸಂಪುಟ ರಚನೆ ಎಂದು ಸಿಎಂ ಹೇಳಿಲ್ಲ. ಸಚಿವ ಸ್ಥಾನಕ್ಕೆ ವಾಲ್ಮೀಕಿ ಸಮುದಾಯದವರ ಒತ್ತಾಯ ಇದೆ. ಈ ಬಗ್ಗೆ ಹೈಕಮಾಂಢ್ ನಾಯಕರು ತೀರ್ಮಾನ ಮಾಡುತ್ತಾರೆ. ಒಂದು ವೇಳೇ ಹೈಕಮಾಂಡ್ ತೀರ್ಮಾನಿಸಿದರೆ ನಿಲ್ಲಿಸಲು ಆಗಲ್ಲ ಎಂದರು.
ಸಿಎಂ ಸಿದ್ದರಾಮಯ್ಯ ರೆಗ್ಯುಲರ್ ಆಗಿ ಔತಣಕೂಟ ಏರ್ಪಡಿಸಿದ್ದಾರೆ. ಶಾಸಕರನ್ನ ಔತಣಕೂಟಕ್ಕೆ ಕರೆಯುವುದು ಹೊಸದು ಅಲ್ಲ. ವಿಶ್ವಾಸ ಇದ್ದೇ ಇದೆ. ಊಟ ಹಾಕಿ ವಿಶ್ವಾಸ ತೆಗೆದುಕೊಳ್ಳಬೇಕಾ ? ಎಂದು ಸಚಿವ ಪರಮೇಶ್ವರ್ ನುಡಿದರು.
Key words: dinner, cabinet expansion, Minister, Parameshwar