ಮಹದಾಯಿ, ಮೇಕೆದಾಟು ಯೋಜನೆಗೆ ಕೇಂದ್ರ ಅನುಮತಿ ನೀಡಲಿ- ಗೃಹ ಸಚಿವ ಪರಮೇಶ್ವರ್

ಬೆಂಗಳೂರು,ಜುಲೈ,25,2025 (www.justkannada.in): ಮಹದಾಯಿ,  ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರ ಅನುಮತಿ ನೀಡಬೇಕು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಆಗ್ರಹಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್,  ಮಹದಾಯಿ ಯೋಜನೆಗೆ 2022ರಲ್ಲಿ ಕೇಂದ್ರ ಒಂದು ರೀತಿಯಲ್ಲಿ ಅನುಮತಿ ನೀಡಿತ್ತು. ಆ ಮೇಲೆ ಸಂಘರ್ಷ ಪ್ರಾರಂಭ ಆಗಿದೆ.  ಇದಕ್ಕೆ ನಿರ್ಬಂಧ ಹೇರಬಾರದು.  ಕೇಂದ್ರ ಸರ್ಕಾರ ಬಗೆಹರಿಸಬೇಕು.  ಮೇಕೆದಾಟು ಯೋಜನೆ ಬೆಂಗಳೂರಿಗೆ ಕುಡಿಯುವ ನೀರು ಯೋಜನೆ.  ಮೇಕೆದಾಟು ಯೋಜನೆಗೂ ಕೇಂದ್ರ ಅನುಮತಿ ಕೊಡಬೇಕು  ಎಂದು ಒತ್ತಾಯಿಸಿದರು.

ನೀರಾವರಿ ಯೋಜನೆ ಕುರಿತು ಸರ್ವಪಕ್ಷ ಸಭೆ ಕರೆಯುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ್,  ಈ  ಬಗ್ಗೆ ಸಿಎಂ ನೀರಾವರಿ ಸಚಿವರು ತೀರ್ಮಾನಿಸುತ್ತಾರೆ. ವಿಪಕ್ಷದವರು ರಾಜ್ಯ ಸರ್ಕಾರಕ್ಕೆ ಸಲಹೆ ಕೊಟ್ಟು ಸಕಾರಾತ್ಮಕ  ಟೀಕೆ ಮಾಡಲಿ ಪರಿಗಣಿಸೋಣ. ಆಡಳಿತ ಪಕ್ಷದ ವಿರುದ್ದ ವಿಪಕ್ಷ ಟೀಕೆ ಮಾಡುವುದು ಸಹಜ. ನಾವು ವಿಪಕ್ಷದಲ್ಲಿದ್ದಾಗಲೂ ಟೀಕೆ ಮಾಡಿದ್ದೇವೆ ಎಂದರು.vtu

Key words: Central Government, permission, Mahadayi, Minister, Parameshwar