Sunday, August 30, 2026

BDA Apartments

Home Front Page ಯತ್ನಾಳ್ ಕಾಂಗ್ರೆಸ್ ಬಿ ಟೀಂ ಆಗಿ ಕೆಲಸ ಮಾಡ್ತಿದ್ದಾರೆ: ಮೊದಲು ನೀನು ರಾಜೀನಾಮೆ ನೀಡು-ಸಚಿವ ಮುರುಗೇಶ್...

ಯತ್ನಾಳ್ ಕಾಂಗ್ರೆಸ್ ಬಿ ಟೀಂ ಆಗಿ ಕೆಲಸ ಮಾಡ್ತಿದ್ದಾರೆ: ಮೊದಲು ನೀನು ರಾಜೀನಾಮೆ ನೀಡು-ಸಚಿವ ಮುರುಗೇಶ್ ನಿರಾಣಿ ಕಿಡಿ…

ಬೆಂಗಳೂರು,ಫೆಬ್ರವರಿ,22,2021(www.justkannada.in):  ಬಸನಗೌಡ ಪಾಟೀಲ್ ಯತ್ನಾಳ ಕಾಂಗ್ರೆಸ್​ನ ಬಿ ಟೀಂ ಆಗಿ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ನಾಯಕರ ಮೇಲೆ ಯತ್ನಾಳ ವಾಗ್ದಾಳಿ ಮಾಡುತ್ತಿದ್ದಾರೆ. ನಾವು ರಾಜೀನಾಮೆ ನೀಡುವಂತೆ ಹೇಳಲು ಇವರ್ಯಾರು. ಯತ್ನಾಳ್ ಮೊದಲು ನೀನು ರಾಜೀನಾಮೆ ನೀಡು ಎಂದು ಏಕವಚನದಲ್ಲೇ ಸಚಿವ ಮುರುಗೇಶ್ ನಿರಾಣಿ ಕಿಡಿಕಾರಿದರು.

ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗಾಗಿ ಹೋರಾಟ ಬಿಗಿಪಟ್ಟು ಹಿಡಿದಿರುವ ಹಿನ್ನೆಲೆಯಲ್ಲಿ ಇಂದು ಸಚಿವರಾದ ಮುರುಗೇಶ್ ನಿರಾಣಿ ಮತ್ತು ಸಿ.ಸಿ ಪಾಟೀಲ್ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಮುರುಗೇಶ್ ನಿರಾಣಿ,  ಯತ್ನಾಳ್ ಕಾಂಗ್ರೆಸ್ ನ ಬಿ ಟೀಂ ಆಗಿ ಕೆಲಸ ಮಾಡುತ್ತಿದ್ದಾರೆ. ಯತ್ನಾಳ್ 25 ವರ್ಷಗಳಿಂದ ವಾಗ್ದಾಳಿ ನಡೆಸಿದ್ದಾರೆ. ಯಡಿಯೂರಪ್ಪ ಶೋಭಾ ಕರಂದ್ಲಾಜೆ, ಸೋಮಣ್ಣ ನನ್ನ ಮೇಲೆ ವಾಗ್ದಾಳಿ ನಡೆಸಿದ್ದಾರೆ.  ಯತ್ನಾಳ ನೀನು ಸಾಕಷ್ಟು ತಪ್ಪು ಮಾಡಿದ್ದೀಯಾ. ಮೊದಲು ನೀನು ನಿನ್ನ ಮನಸಾಕ್ಷಿಯನ್ನು ಕೇಳಿಕೋ, ನೀನ್ನನ್ನು ಶಾಸಕನನ್ನಾಗಿ ಮಾಡಿದ್ದು ನಮ್ಮ ಪಕ್ಷ. ನೀವು ನಮ್ಮ ಪಕ್ಷದ ಆಶೀರ್ವಾದದಿಂದ ಶಾಸಕನಾಗಿದ್ದೀಯಾ. ಮೊದಲು ನೀನು ರಾಜೀನಾಮೆ ಕೊಡು. ಅಮೇಲೆ ಮಾತನಾಡು ಎಂದು ಗುಡುಗಿದರು.

minister- murugesh nirani-outrage-against-MLA- Basanagowda patil yatnal
ಕೃಪೆ- internet

ಹಾಗೆಯೇ ವಿಜಯಾನಂದ ಕಾಶಪ್ಪನವರ್  ವಿರುದ್ದ ವಾಗ್ದಾಳಿ ನಡೆಸಿದ ಮುರುಗೇಶ್ ನಿರಾಣಿ  ನಿನ್ನೆ ಪಂಚಮಸಾಲಿ ಸಮಾವೇಶ ಆಗಿರಲಿಲ್ಲ. ಕಾಂಗ್ರೆಸ್ ಸಮಾವೇಶವಾಗಿತ್ತು. ಕಾಶಪ್ಪನವರ್ ಕುಟುಂಬದ ಸಮಾವೇಶವಾಗಿತ್ತು. . ಕಾಶಪ್ಪನವರನನ್ನು ಯಾರನ್ನು ಕೇಳಿ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡಿದರು. ಸಿಎಂ ಯಡಿಯೂರಪ್ಪಗೆ ನಮ್ಮೆಲ್ಲಾ ಲಿಂಗಾಯಿತ ಶಾಸಕರ ಬೆಂಬಲವಿದೆ. ಈ ವಿಚಾರವಾಗಿ ನಾವೆಲ್ಲಾ ಶಾಸಕರು ಒಂದಾಗಿದ್ದೇವೆ ಎಂದು ಮುರುಗೇಶ್ ನಿರಾಣಿ ಹೇಳಿದರು.

Key words: minister- murugesh nirani-outrage-against-MLA- Basanagowda patil yatnal