ಕೃತಕ ಬುದ್ಧಿಮತ್ತೆ ಶ್ರೇಷ್ಠತಾ ಕೇಂದ್ರ ಉದ್ಘಾಟಿಸಿದ ಸಚಿವ ಡಾ.ಎಂ.ಸಿ ಸುಧಾಕರ್

ಬೆಂಗಳೂರು,ಫೆಬ್ರವರಿ,12,2026 (www.justkannada.in): ತಾಂತ್ರಿಕ ಶಿಕ್ಷಣದ ವಿದ್ಯಾರ್ಥಿಗಳ ತಂತ್ರಜ್ಞಾನ ಆಲೋಚನೆಗೆ, ಕಲ್ಪನೆಗೆ ಹಾಗೂ ಕನಸುಗಳಿಗೆ ಜೀವ ತುಂಬುವ  ಶ್ರೇಷ್ಠತಾ ಕೇಂದ್ರ ಇಂದು ಲಭ್ಯವಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ ಸುಧಾಕರ್ ಅಭಿಪ್ರಾಯಪಟ್ಟಿದ್ದಾರೆ.

ಎಸ್ ಕೆ ಎಸ್ ಜೆಟಿಐ  ಸರ್ಕಾರಿ ಕಾಲೇಜಿನಲ್ಲಿ  ಗ್ರೀನ್ ಸ್ಕಿಲ್ ಮತ್ತು ಹವಾಮಾನ ಕ್ರಿಯೆಗೆ ಅನ್ವಯಿಸುವ ಕೃತಕ ಬುದ್ಧಿಮತ್ತೆ ಶ್ರೇಷ್ಠತಾ ಕೇಂದ್ರವನ್ನು ಉದ್ಘಾಟಿಸಿ  ಸಚಿವ ಎಂ.ಸಿ ಸುಧಾಕರ್ ಮಾತನಾಡಿದರು.

ಕರ್ನಾಟಕದ ಉನ್ನತ ಶಿಕ್ಷಣದಲ್ಲಿ ಹೊಸ ಪರ್ವ ಆರಂಭಗೊಂಡಿದೆ. ಉದ್ಯೋಗ ಆಧಾರಿತ ಶಿಕ್ಷಣ ವ್ಯವಸ್ಥೆ ತರುವ ಭಾಗವಾಗಿ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಕೌಶಲ್ಯಕ್ಕೆ ಆದ್ಯತೆ ನೀಡುವ ಅಧ್ಯಾಯ ಪ್ರಾರಂಭಗೊಂಡಿದೆ. ಈ ಶ್ರೇಷ್ಠತಾ ಕೇಂದ್ರದಿಂದ ವಿದ್ಯಾರ್ಥಿಗಳಿಗೆ ವೃತ್ತಿ ಆಯ್ಕೆ ಹಾಗೂ ಉದ್ಯೋಗಾವಕಾಶಗಳು ಹೆಚ್ಚು ತೆರೆದುಕೊಳ್ಳಲಿವೆ ಎಂದು  ತಿಳಿಸಿದರು.

ಮುಂದಿನ ಮೂರು ವರ್ಷಗಳಲ್ಲಿ 30000 ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುವುದು ಇದರಿಂದ  ಉದ್ಯೋಗ  ಜಾಗತಿಕ ಮಟ್ಟದಲ್ಲಿ ವಿದ್ಯಾರ್ಥಿಗಳ ಪಾಲಿಗೆ ದೊರೆಯಲಿದೆ. 1M1B ಫೌಂಡೇಶನ್ ಮೈಕ್ರೋಸಾಫ್ಟ್ ಮತ್ತು MeitY ( ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ) ಸ್ಟಾರ್ಟಪ್  ಸಹಯೋಗದಲ್ಲಿ ಅತ್ಯಂತ ಉತ್ಕೃಷ್ಟತೆಯ ಶ್ರೇಷ್ಠತಾ ಕೇಂದ್ರ ಇದಾಗಿದೆ ಎಂದರು.

ಭಾರತದಲ್ಲಿಯೇ ಪ್ರಥಮ ಉನ್ನತ ಗುಣಮಟ್ಟದ ಎಐ ಪ್ರತಿಭೆಯನ್ನು ನಿರ್ಮಿಸುವುದು ಹಾಗೂ  ಗ್ರೀನ್ ಎನರ್ಜಿ ಮತ್ತು ಪರಿಸರ ಕ್ಷೇತ್ರಗಳನ್ನು ಒಳಗೊಂಡಂತೆ ವಿದ್ಯಾರ್ಥಿಗಳು ಹೊಸ ಆವಿಷ್ಕಾರಗಳನ್ನು ಹಾಗೂ ಕಲಿಕೆಯನ್ನು ಈ ಕೇಂದ್ರಗಳಲ್ಲಿ ವೃದ್ಧಿಸಿಕೊಳ್ಳಬಹುದಾ ಗಿರುವ ಮೊದಲ ಶ್ರೇಷ್ಠತಾ ಕೇಂದ್ರ ಈಗ ಬೆಂಗಳೂರಿನಲ್ಲಿ ಆರಂಭಗೊಂಡಿದೆ ಮುಂದಿನ ದಿನಗಳಲ್ಲಿ ಐದು ರಾಜ್ಯಗಳಲ್ಲಿ ಮೈಕ್ರೋಸಾಫ್ಟ್ ಈ ಕೇಂದ್ರಗಳನ್ನು ಸ್ಥಾಪಿಸಲಿದ್ದು ಮೊದಲ ಆದ್ಯತೆ, ಬೆಂಗಳೂರು ವಿದ್ಯಾರ್ಥಿಗಳಿಗೆ ದೊರೆತಿದೆ ಎಂದರು.

ಕರ್ನಾಟಕ ಈಗಾಗಲೇ ತಂತ್ರಜ್ಞಾನ ಹೊಸ ಆವಿಷ್ಕಾರಗಳು ಮತ್ತು ಪ್ರತಿಭೆಗಳಲ್ಲಿ ರಾಷ್ಟ್ರೀಯ ನಾಯಕತ್ವ ಹೊಂದಿದೆ. ಈಗ ಈ ನೂತನ ಗ್ರೀನ್ ಸ್ಕಿಲ್ ಮತ್ತು ಹವಾಮಾನ ಕ್ರಿಯೆಗೆ ಅನ್ವಯಿಸುವ ಕೃತಕ ಬುದ್ಧಿಮತ್ತೆಯ ಶ್ರೇಷ್ಠತಾ ಕೇಂದ್ರ ಸೇರ್ಪಡೆಗೊಂಡಿದೆ ಇದನ್ನು ವಿದ್ಯಾರ್ಥಿಗಳು ಬಳಸಿಕೊಳ್ಳುವ ಮೂಲಕ ಜಾಗತಿಕ ಮಟ್ಟದಲ್ಲಿ ಪರಿಸರ ಕಾಳಜಿಯನ್ನು ಕೊಂಡೊಯ್ಯಬೇಕಿದೆ ಎಂದು ಡಾ. ಎಂ.ಸಿ ಸುಧಾಕರ್ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಮೈಕ್ರೋಸಾಫ್ಟ್ ಗ್ಲೋಬಲ್ ಮುಖ್ಯಸ್ಥ ಸೋಮಣ್ಣ ಪಾಲಕಂಡ, ಮೈಕ್ರೋಸಾಫ್ಟ್ ಸಿಎಸ್ಆರ್ ಮುಖ್ಯಸ್ಥೆ ಮಂಜು ದಾಸ್ಮಾನ್, ಮೈಕ್ರೋಸಾಫ್ಟ್ ಹಿರಿಯ ನಿರ್ದೇಶಕಿ ಚಿಂತಾಮಣಿ ಪದ್ಮನಾಭನ್ ಹಾಗೂ ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ಖುಷ್ಬು ಜಿ.ಚೌದರಿ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತಾರಾದ ಮಂಜುಶ್ರೀ ಹಾಗೂ ಇತರ ಅಧಿಕಾರಿಗಳು ಪಾಲ್ಗೊಂಡಿದ್ದರು.

ENGLISH SUMMARY..

Centre of Excellence for Green Skills and Applied AI for Climate Action Inaugurated at SKSJTI, Bengaluru

Bengaluru, [Date] – In a significant boost to Karnataka’s technical education landscape, Hon’ble Minister for Higher Education, Government of Karnataka, Dr. M. C. Sudhakar, today inaugurated the Centre of Excellence for Green Skills and Applied Artificial Intelligence for Climate Action at SKSJTI Government College, Bengaluru.

Describing the Centre as a “world-class facility that will bring life to the technological ideas, innovations, and aspirations of technical education students,” Dr. Sudhakar stated that a new chapter has begun in Karnataka’s higher education ecosystem. He emphasized that as part of the State’s commitment to employment-oriented education, government institutions are placing strong emphasis on skill development. “This Centre of Excellence will significantly expand career pathways and employment opportunities for students,” he added.

The Minister announced that 30,000 students will be trained over the next three years, equipping them with globally relevant skills and enhancing their access to international employment opportunities.

Established through the collaborative efforts of the 1M1B Foundation, Microsoft, and the Ministry of Electronics and Information Technology (MeitY), the Centre aims to build high-quality AI talent in India and enable students to drive innovation in green energy and environmental sustainability. Bengaluru is home to the first such Centre, with Microsoft planning to establish similar facilities in five states—Karnataka being accorded priority.

Highlighting Karnataka’s leadership in technology, innovation, and human capital, Dr. Sudhakar urged students to make full use of the Centre to contribute meaningfully to global environmental sustainability efforts.

The inauguration was attended by Mr. Somanna Palakand, Global Head, Microsoft; Ms. Manju Dasman, Head – Microsoft CSR; Ms. Chintamani Padmanabhan, Senior Director, Microsoft; Ms. Khushboo G. Choudhary, Secretary, Department of Higher Education; Ms. Manjushree, Commissioner, Department of Technical Education; along with other distinguished dignitaries and officials.

Key words: Minister, MC Sudhakar, Centre, Green Skills , AI, SKSJTI, Bengaluru