RSS ಪಥ ಸಂಚಲನ ವಿಚಾರದಲ್ಲಿ ರಾಜಕೀಯ ಮಾಡ್ತಿಲ್ಲ- ಸಚಿವ ಎಂ.ಸಿ ಸುಧಾಕರ್

ಕಾರವಾರ, ಅಕ್ಟೋಬರ್,31,2025 (www.justkannada.in):  ಆರ್ ಎಸ್ ಎಸ್ ಪಥ ಸಂಚಲನ ವಿಚಾರದಲ್ಲಿ ರಾಜಕೀಯ ಮಾಡುತ್ತಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಎಂ.ಸಿ ಸುಧಾಕರ್ ತಿಳಿಸಿದರು.

ಕಾರವಾರದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಎಂ.ಸಿ ಸುಧಾಕರ್, ಸರ್ಕಾರಿ ಜಾಗದಲ್ಲಿ ಕಾರ್ಯಕ್ರಮಕ್ಕೆ  ಒಪ್ಪಿಗೆ ಬೇಕು.  ಸಂಘ ಸಂಸ್ಥೆಗಳು ಚಟುವಟಿಕೆಗೆ ಒಪ್ಪಿಗೆ ಪಡೆಯಬೇಕು. ಅನುಮತಿ ಪಡೆಯಬೇಕೆಂಬುವುದು ಹೊಸ ಸುದ್ದಿಯಲ್ಲ. ಜಗದೀಶ್  ಶೆಟ್ಟರ್ ಸಿಎಂ ಆಗಿದ್ದಾಗ ಆದೇಶ ಹೊರಡಿಸಿದ್ದರು.

ಹಿಂದಿನ ಆದೇಶ ಗಮನದಲ್ಲಿಟ್ಟು ಪತ್ರವನ್ನ ಬರೆದಿದ್ದಾರೆ. ಅದರ ಪ್ರಕಾರವೇ ಸರ್ಕಾರ ಆದೇಶ ಹೊರಡಿಸಿದೆ. ಈ ಆದೇಶ ಕೇವಲ ಆರ್ ಎಸ್ ಎಸ್ ಗೆ ಸೀಮಿತ ಅಲ್ಲ.  ಎಲ್ಲಾ ಸಂಘಟನೆಗಳೂ ಈ ಆದೇಶವನ್ನ ಪಾಲಿಸಬೇಕಿದೆ ಎಂದು ಎಂ.ಸಿ ಸುಧಾಕರ್ ತಿಳಿಸಿದರು.

Key words: RSS, does, not play, politics, path movement, Minister, MC Sudhakar