ವಿಜಯೇಂದ್ರಗೆ ಬೇರೆ ಬಂಡವಾಳವಿಲ್ಲ: ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ- ಸಚಿವ ಎಂ.ಬಿ ಪಾಟೀಲ್

ವಿಜಯಪುರ,ಸೆಪ್ಟಂಬರ್,1,2025 www.justkannada.in):  ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರಗೆ ಬೇರೆ ಬಂಡವಾಳವಿಲ್ಲ. ಹೀಗಾಗಿ ಧರ್ಮಸ್ಥಳ ಪ್ರಕರಣದ ವಿಚಾರದಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಕಿಡಿಕಾರಿದರು.

ವಿಜಯಪುರದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ  ಸಚಿವ ಎಂ.ಬಿ.ಪಾಟೀಲ್,  ಧರ್ಮಸ್ಥಳದಲ್ಲಿ ನೂರಾರು ಶವ ಹೂತಿಟ್ಟ ಆರೋಪ ಪ್ರಕರಣ ಸಂಬಂಧ ನಾವು ಎಸ್ ಐಟಿ ರಚಿಸಿದಾಗ ಆರಂಭದಲ್ಲಿ ಬಿಜೆಪಿಯವರು ಸ್ವಾಗತ ಮಾಡಿದರು. ಆದರೆ ಮುಸುಕುಧಾರಿ ತೋರಿಸಿದ  ಜಾಗದಲ್ಲಿ ಏನೂ ಸಿಗದೇ ಇದ್ದಾಗ ಬಿಜೆಪಿಯವರು ಉಲ್ಟಾ ಹೊಡೆದಿದ್ದಾರೆ. ನಮ್ಮ ಜಾಗದಲ್ಲಿ ಬಿಜೆಪಿಯವರಿದ್ದರೂ ಎಸ್ ಐಟಿ ರಚಿಸುತ್ತಿದ್ದರು. ಆದರೆ ಈಗ ದುರುಪಯೋಗಪಡಿಸಿಕೊಳ್ಳಲು ಹೊರಟಿದ್ದಾರೆ ಎಂದು ಹರಿಹಾಯ್ದರು.

ನಾವು ಎಸ್ ಐಟಿ ರಚನೆ ಮಾಡಿ ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥ ಸನ್ನಿಧಾನ ಹಾಗೂ ಧರ್ಮದರ್ಶಿಗಳ ಮೇಲೆ ಇದ್ದಂತಹ ಕಳಂಕವನ್ನು ತೆಗೆದುಹಾಕಿದ್ದೇವೆ. ಜನರ ನಂಬಿಕೆಯನ್ನು ಹೆಚ್ಚಿಸಿದ್ದೇವೆ  ಎಂದು ಸಚಿವ ಎಂ.ಬಿ ಪಾಟೀಲ್ ತಿಳಿಸಿದರು.

Key words: Dharmasthala case, BY Vijayendra, Politics, Minister, MB Patil