ವಿದ್ಯಾರ್ಥಿಗಳೊಂದಿಗೆ ಸಂವಾದ: ಹಲವು ಶೈಕ್ಷಣಿಕ ವಿಚಾರ ಹಂಚಿಕೊಂಡ ಸಚಿವ ಮಧು ಬಂಗಾರಪ್ಪ

ಬೆಂಗಳೂರು,ಆಗಸ್ಟ್,21,2025 (www.justkannada.in): ಇಂದು ವಿಧಾನಸೌಧದಲ್ಲಿ ದಿ ಆಶ್ರಮ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳೊಂದಿಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್. ಮಧು ಬಂಗಾರಪ್ಪ ಅವರು ಸಂವಾದ ನಡೆಸಿದರು.

ಶಾಲೆಯ ಮಕ್ಕಳು ತಮ್ಮ ಶಿಕ್ಷಕರೊಂದಿಗೆ ವಿಧಾನಸಭೆಯ ಪ್ರಸ್ತುತ ನಡೆಯುತ್ತಿರುವ ಅಧಿವೇಶನವನ್ನು ವೀಕ್ಷಿಸಲು ಆಗಮಿಸಿದ್ದರು.  ಈ ವಿದ್ಯಾರ್ಥಿಗಳೊಂದಿಗೆ ಸಚಿವ ಮಧು ಬಂಗಾರಪ್ಪ ಸಂವಾದ ನಡೆಸಿ ಶಿಕ್ಷಣ ಕ್ಷೇತ್ರದ ಸುಧಾರಣೆಗಳ ಕುರಿತು, ವಿಶೇಷವಾಗಿ ಮೂರು ಪರೀಕ್ಷೆಗಳ ನೀತಿಯ ಬಗ್ಗೆ, ಹಲವು ಶೈಕ್ಷಣಿಕ ವಿಚಾರಗಳನ್ನು ಹಂಚಿಕೊಂಡರು. ವಿದ್ಯಾರ್ಥಿಗಳ ಕುತೂಹಲ, ಜ್ಞಾನಾಸಕ್ತಿ ಮತ್ತು ಶಿಕ್ಷಣದ ಭವಿಷ್ಯದ ಕುರಿತ ಅವರ ಚಿಂತನೆಗಳನ್ನು ನೋಡಿ ಸಚಿವ ಮಧು ಬಂಗಾರಪ್ಪ ಅಪಾರ ಸಂತೋಷ ವ್ಯಕ್ತಪಡಿಸಿದರು.

ಶಿಕ್ಷಣತಜ್ಞರಾಗಿದ್ದ ಹಾಗು ಡೆಕ್ಕನ್ ಹೆರಾಲ್ಡ್ ಮತ್ತು ಪ್ರಜವಾಣಿ ಪತ್ರಿಕೆಗಳ ಸ್ಥಾಪಕ ಕೆ. ಎನ್. ಗುರುಸ್ವಾಮಿ ಅವರು ಸ್ಥಾಪಿಸಿದ ದಿ ಆಶ್ರಮ ಶಾಲೆ, ನಿಜಕ್ಕೂ ವಿದ್ಯಾರ್ಥಿಗಳಲ್ಲಿ ಪ್ರಶ್ನಿಸುವ ಮನೋಭಾವವನ್ನು ಬೆಳೆಸಿದೆ ಎಂದು ಹೇಳಿದರು.

ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಲು ಹಾಗೂ ಶಿಕ್ಷಣ ಕ್ಷೇತ್ರದ ಪ್ರಗತಿಯಲ್ಲಿ ತಾವು ಸಹಭಾಗಿಗಳಾಗುವಂತೆ ಅವರನ್ನು ಪ್ರೋತ್ಸಾಹಿಸಲು ಅವಕಾಶ ದೊರಕಿದ ಕಾರಣ ತಮಗೆ ಬಹಳ ಸಂತೋಷವಾಯಿತೆಂದು ಸಚಿವ ಮಧು ಬಂಗಾರಪ್ಪ ಹರ್ಷ ವ್ಯಕ್ತಪಡಿಸಿದರು.

ENGLISH SUMMARY..

Minister for School Education and Literacy, Sri S. Madhu Bangarappa, interacted with the bright young minds of The Ashram School at Vidhana Soudha, where they had come to witness the ongoing session of the Karnataka Legislature. The minister engaged with the students on several thought-provoking issues in education, particularly examination reforms, including the three-exam policy.
He further expressed that it was truly inspiring to see their curiosity and awareness about the future of learning. The Ashram School, founded by the late Sri K. N. Guruswamy — a visionary philanthropist, educationist, and founder of the Deccan Herald and Prajavani group — has long nurtured students with a strong spirit of inquiry. The minister added that he was delighted to respond to their questions and encourage them to remain active participants in shaping a progressive education system.

Key words: Minister, Madhu Bangarappa, Interaction, with, students