ಕಾಲ್ತುಳಿತ ಪ್ರಕರಣದಲ್ಲಿ ಸರ್ಕಾರದ ವಿರುದ್ದ ಆರೋಪ: ವಿಪಕ್ಷಗಳಿಗೆ ಸಚಿವ ಮಧು ಬಂಗಾರಪ್ಪ ತಿರುಗೇಟು

ಬೆಂಗಳೂರು,ಜೂನ್,7,2025 (www.justkannada.in):  ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತದಿಂದ 11 ಜನರ ಸಾವಿಗೆ ಸರ್ಕಾರವೇ ನೇರ ಹೊಣೆ  ಹೀಗಾಗಿ ಸಿಎಂ, ಡಿಸಿಎಂ, ಗೃಹಸಚಿವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸುತ್ತಿರುವ ವಿಪಕ್ಷಗಳ ನಾಯಕರಿಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಸಚಿವ ಮಧು ಬಂಗಾರಪ್ಪ, ಪಹಲ್ಗಾಮ್ ದುರಂತದಲ್ಲಿಅಮಾಯಕರೂ ಸತ್ತಿರಲಿಲ್ಲವೇ? ಯಾಕೆ ಪ್ರಧಾನಿ ಮೋದಿ ಅವರ ರಾಜೀನಾಮೆ ಕೇಳಲಿಲ್ಲ. ಗುಪ್ತಚರ ವೈಪಲ್ಯ ಆಯಿತು. ಆದರೆ  ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಂಡ್ರಾ,  ಶಿಕ್ಷೆ ಆಯ್ತಾ ..?  ಎಂದು ಪ್ರಶ್ನಿಸಿದರು.

ಕಾಲ್ತುಳಿತ ದುರಂತದಲ್ಲಿ ಯಾರದೇ ತಪ್ಪಿದ್ದರೂ ಕ್ರಮ ಆಗುತ್ತೆ. ಸಿಎಂ ಸಿದ್ದರಾಮಯ್ಯ ಎಲ್ಲ ರೀತಿಯ ಕ್ರಮ ತೆಗೆದುಕೊಂಡಿದ್ದಾರೆ. ದುರಂತದಲ್ಲೂ ರಾಜಕೀಯ ಮಾಡುವುದು ಬಿಜೆಪಿಯವರ ಕೆಟ್ಟ ಚಾಳಿ ಎಂದು  ಮಧು ಬಂಗಾರಪ್ಪ ಕಿಡಿಕಾರಿದರು.vtu

Key words: stampede case, Allegations, government, Minister, Madhu Bangarappa