ಬೆಂಗಳೂರು,ಮಾರ್ಚ್,18,2026 (www.justkannada.in): ಇಂದಿನಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ ಆರಂಭವಾಗಿದ್ದು 8.65 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಈ ಕುರಿತು ಮಾತನಾಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಫೆ. 28ರಿಂದ ನಿನ್ನೆಯವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ನಡೆದಿದೆ. ಯಾವುದೇ ತೊಂದರೆಯಾಗದ ರೀತಿ ಪರೀಕ್ಷೆ ಮಾಡಿದ್ದೇವೆ ಇಂದಿನಿಂದ ಏ.2ರವರೆಗೆ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಯುತ್ತದೆ. ಒಟ್ಟು 2800 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ 8 ಲಕ್ಷ 65 ಸಾವಿರ ಮಕ್ಕಳು ಪರೀಕ್ಷೆ ಬರೆಯುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಕೂಡ ಮಕ್ಕಳಿಗೆ ವಿಶ್ ಮಾಢಿದ್ದಾರೆ ಎಂದರು.
ಈ ಬಾರಿ ಪಿಯುಸಿ, ಎಸ್ ಎಸ್ ಎಲ್ ಸಿಯಲ್ಲಿ ಒಳ್ಳೇ ರಿಸಲ್ಟ್ ಬರುವ ನಿರೀಕ್ಷೆ ಇದೆ. ಗ್ರಾಮೀಣ ಭಾಗ ನಗರ ಭಾಗದಲ್ಲಿ ಒಂದೊಂದು ರೀತಿ ಟಾರ್ಗೆಟ್ ಮಾಡಲಾಗುತ್ತದೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.
Key words: SSLC Exam. Today, Minister, Madhu Bangarappa







