ರಾಜೀವ್ ಗೌಡ ವಿರುದ್ದ ಕ್ರಮ: ಅಧಿಕಾರಿ ವರ್ಗದ ನೈತಿಕ ಸ್ಥೈರ್ಯ ಕಾಪಾಡುವುದು ಕರ್ತವ್ಯ- ಸಚಿವ ಎಂ.ಸಿ ಸುಧಾಕರ್

ಚಿಕ್ಕಬಳ್ಳಾಪುರ,ಜನವರಿ,21,2026 (www.justkannada.in): ಶಿಡ್ಲಘಟ್ಟ ಪೌರಾಯುಕ್ತೆ ಅಮೃತಾಗೌಡ ಅವರಿಗೆ ಜೀವ ಬೆದರಿಕೆ ಹಾಕಿದ ಪ್ರಕರಣ ಸಂಬಂಧ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ವಿರುದ್ದ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ ಸುಧಾಕರ್ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿದ ಸಚಿವ ಎಂ.ಸಿ ಸುಧಾಕರ್,  ಪೌರಾಯುಕ್ತೆ ಅಮೃತಾಗೌಡ ದೂರು ಕೊಡಲು  ವಿಳಂಬ ಮಾಡಿದರು.  ಸಂಜೆ ದೂರು ನೀಡಿದರು.   ರಾಜೀವ್ ಗೌಡ ಎಲ್ಲಿದ್ದಾರೆಂದು ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಸಿಎಂ, ಡಿಸಿಎಂ, ಗೃಹ ಸಚಿವರು ಸೇರಿ ಎಲ್ಲರೂ ಸ್ಪಷ್ಟವಾಗಿ ಹೇಳಿದ್ದಾರೆ. ರಾಜೀವ್ ಗೌಡ ವಿರುದ್ದ ಕ್ರಮ ಕೈಗೊಳ್ಳುತ್ತೇವೆ ಅಧಿಕಾರ ವರ್ಗದ ನೈತಿಕ ಸ್ಥೈರ್ಯ ಕಾಪಾಡೋದು ನಮ್ಮ ಕರ್ತವ್ಯ ಎಂದು ಸಚಿವ ಎಂ ಸಿ ಸುಧಾಕರ್ ತಿಳಿಸಿದರು.

Key words: Action, against ,Rajiv Gowda, Minister, M.C. Sudhakar