ಸ್ವಾತಂತ್ರ ಹೋರಾಟದಲ್ಲಿ ಭಾಗಿಯಾಗದವರಿಂದ ನಾವು ಕಲಿಯಬೇಕೇ..? ಆರ್ ಎಸ್ ಎಸ್ ಗೆ ಸಚಿವ ಎಂ.ಬಿ ಪಾಟೀಲ್ ಟಾಂಗ್

ವಿಜಯಪುರ, ಅಕ್ಟೋಬರ್,25,2025 (www.justkannada.in):  ಆರ್ ಎಸ್ ಎಸ್ ನವರು ಯಾಕೆ ಸ್ವಾತಂತ್ರ ಹೋರಾಟದಲ್ಲಿ ಪಾಲ್ಗೊಳ್ಳಲಿಲ್ಲ. ಸ್ವಾತಂತ್ರ ಹೋರಾಟದಲ್ಲಿ ಭಾಗಿಯಾಗದವರಿಂದ ನಾವು ಕಲಿಯಬೇಕಿದೆ ಎಂದು  ಆರ್ ಎಸ್ ಎಸ್ ಗೆ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಟಾಂಗ್ ಕೊಟ್ಟರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಎಂ.ಬಿ ಪಾಟೀಲ್, ಆರ್ ಎಸ್ ಎಸ್ ನವರು ಸ್ವಾತಂತ್ರ ಹೋರಾಟದಲ್ಲಿ ಯಾಕೆ ಪಾಲ್ಗೊಂಡಿರಲಿಲ್ಲ ಸ್ವಾತಂತ್ರ ಹೋರಾಟ ಎಂಬುವುದೇ ಒಂದು ದೊಡ್ಡ ಸುನಾಮಿ ಯಾಕೆ ಆರ್ ಎಸ್ಎಸ್  ಸ್ವಾತಂತ್ರ ಹೋರಾಟದಲ್ಲಿ ಭಾಗಿಯಾಗಿರಲಿಲ್ಲ. ಇವರೆಲ್ಲ ದೇಶಭಕ್ತರು ಇವರಿಂದ ನಾವು ಕಲಿಯಬೇಕಾ?  ಯಾರು ಸ್ವಾತಂತ್ರ ಹೋರಾಟದಲ್ಲಿ ಭಾಗವಹಿಸಿಲ್ಲವೋ ಅವರಿಂದ ನಾವು ಈಗ ಕಲಿಯಬೇಕಿದೆ. ಎಂದು ಲೇವಡಿ ಮಾಡಿದರು.

ರಾಜ್ಯದಲ್ಲಿ ಆರ್ ಎಸ್ ಎಸ್ ಗೆ ಕಡಿವಾಣ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಎಂ.ಬಿ ಪಾಟೀಲ್,  ಯಾವುದೇ ಕಾರ್ಯಕ್ರಮ ಇರಲಿ ಅನುಮತಿ ಪಡೆಯಬೇಕು. ಇದರಲ್ಲಿ ಕೇವಲ ಆರ್ ಎಸ್ಎಸ್ ಸಂಘಟನೆ ಬರಲ್ಲ. ಆರ್ ಎಸ್ ಎಸ್, ದಲಿತ ಸಂಘಟನೆ, ಲಿಂಗಾಯತ ಸಂಘಟನೆ ಇತರೆ ಯಾವುದೇ ಸಂಘಟನೆ ಇದ್ದರೂ ಅನುಮತಿ ಕಡ್ಡಾಯ. ಎಲ್ಲರೂ ಅನುಮತಿ ಪಡೆದು ಕಾರ್ಯಕ್ರಮ ಮಾಡಬೇಕು  ಎಂದು  ಎಂ.ಬಿ ಪಾಟೀಲ್ ತಿಳಿಸಿದರು.

Key words:  learn, not participate, freedom struggle, RSS, Minister M.B. Patil