ಬೆಂಗಳೂರು,ಅಕ್ಟೋಬರ್,14,2025 (www.justkannada.in): ನಿನ್ನೆ ಸಿಎಂ ಸಿದ್ದರಾಮಯ್ಯ ಅವರು ಆಯೋಜಿಸಿದ್ದ ಡಿನ್ನರ್ ಮೀಟಿಂಗ್ ನಲ್ಲಿ ಯಾವುದೇ ಚರ್ಚೆಯಾಗಿಲ್ಲ ಎಂದು ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ತಿಳಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಎಂ.ಬಿ ಪಾಟೀಲ್, ಡಿನ್ನರ್ ಮೀಟಿಂಗ್ ನಲ್ಲಿ ಸೀರಿಯಸ್ ಮಾತುಕತೆ ನಡೆದಿಲ್ಲ. ಊಟ ಮಾಡಲು ಮಾತ್ರ ಸೇರಿದ್ದವು ಯಾವುದೇ ಚರ್ಚೆಯಾಗಿಲ್ಲ. ಡಿಸಿಎಂ ಡಿಕೆ ಶಿವಕುಮಾರ್ ಕೆಲಸ ಇತ್ತು ಅಂತ ಬೇಗ ಹೋದರು. ಆದರೆ ಡಿಕೆ ಶಿವಕುಮಾರ್ ಅಷ್ಟೇನೂ ಬೇಗ ಹೋಗಿಲ್ಲ ಏನೇ ಇದ್ರೂ ಅಭಿಪ್ರಾಯ ಪಡೆದು ತೀರ್ಮಾನ ಮಾಡುತ್ತಾರೆ ಎಂದರು.
ಬಿಜೆಪಿಯವರು ತಮ್ಮ ಮನೆಯನ್ನ ನೋಡಿಕೊಳ್ಳಬೇಕು ಬಿಜೆಪಿಯವರದ್ದು ಒಂದು ಮನೆ ನೂರು ಬಾಗಿಲು ಆಗಿದೆ. ಎಲ್ಲರದ್ದೂ ಒಂದೊಂದೇ ಬಾಗಿಲು ಆಗಿಲ್ಲ ಎಂದು ಸಚಿವ ಎಂ.ಬಿ ಪಾಟೀಲ್ ಕುಟುಕಿದರು.
Key words: No discussion, dinner meeting, Minister, M.B. Patil