ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಸಚಿವ ಎಂ.ಬಿ ಪಾಟೀಲ್ ಆಗ್ರಹ

ಬೆಂಗಳೂರು, ಅಕ್ಟೋಬರ್,6,2025 (www.justkannada.in): ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ  ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಆಗ್ರಹಿಸಿದ್ದಾರೆ.

ಈ ಕುರಿತು ಮಾತನಾಡಿರುವ ಎಂ.ಬಿ ಪಾಟೀಲ್, ಜೈನರು ಸಿಖ್ಖರು ಬೌದ್ಧರಿಂದ ಯಾರಿಗಾದರೂ ತೊಂದರೆ ಆಯ್ತಾ ಹಾಗೆಯೇ ಲಿಂಗಾಯತ ಧರ್ಮ.  ಈ ಬಾರಿ ಸಿದ್ದರಾಮಯ್ಯ ತಲೆಗೆ ಕಟ್ಟುವುದಕ್ಕೆ ಆಗುವುದಿಲ್ಲ.  ಹಿಂದೆ  ಆಡಿದ ಹಾಗೆ ಈಗ ಆಟ ಆಡಲು ಆಗುವುದಿಲ್ಲ. ಭೌಗೋಳಿಕವಾಗಿ ನಾವೆಲ್ಲಾ ಭಾರತೀಯರು ಹಿಂದೂಗಳು.  ಹೋದ ಬಾರಿ ಸಿಎಂ ಸಿದ್ದರಾಮಯ್ಯ ತಲೆಗೆ ಕಟ್ಟಿದರು. ಆದರೆ ಈ ಸಲ ಯಾರ ಆಟಗಳೂ ನಡೆಯುವುದಿಲ್ಲ ಎಂದರು.

ಲಿಂಗಾಯತ ಧರ್ಮದವರು ಚತುರ್ವರ್ಣದಿಂದ ಹೊರಗೆ ಉಳಿದಿದ್ದೇವೆ.  ನಿನ್ನೆ ಮಠಾಧಿಪತಿಗಳ ಒಕ್ಕೂಟದಿಂದ ಕಾರ್ಯಕ್ರಮ ನಡೆದಿದ್ದು. ದ್ವಂದ್ವ ನಿಲುವು ಇರುವವರನ್ನ ನಿನ್ನೆ ಸಭೆಗೆ ಕರೆದಿಲ್ಲ. ನಿನ್ನೆ ಯಾರ ಜಾತಿ ಹೆಸರು ಬರೆಸಿ ಅಂತಾ ಕೇಳಿಲ್ಲ  ಸಣ್ಣ ಸಣ್ಣ ಉಪಪಂಗಡಗಳನ್ನು ಒಟ್ಟಿಗೆ ಕೊಂಡೊಯ್ಯಬೇಕು.  ಇವರೊಂದಿಗೆ ನಾವು ಸಂಬಂಧ ಬೆಳೆಸಿಲ್ಲ. ಎಲ್ಲರನ್ನೂ ಅಪ್ಪಿಕೊಳ್ಳಬೇಕು. ನಾವು ಹಿಂದೂ ವಿರೋಧಿಗಳಲ್ಲ ವೀರಶೈವ ವಿರೋಧಿಗಳಲ್ಲ. ಒಬಿಸಿಗೆ ಸೇರಿಸಿ ಎಂಬುದರಲ್ಲಿ ತಪ್ಪೇನಿದೆ ಎಂದು ಸಚಿವ ಎಂ.ಬಿ ಪಾಟೀಲ್ ಪ್ರಶ್ನಿಸಿದ್ದಾರೆ.

Key words: Minister, M.B. Patil, demands, separate, Lingayat religion