ಬೆಂಗಳೂರು,ಆಗಸ್ಟ್,28,2025 (www.justkannada.in): ಮೈಸೂರು ದಸರಾ ಉದ್ಘಾಟನೆಗೆ ಸಾಹಿತಿ ಬಾನು ಮುಷ್ತಾಕ್ ಅವರನ್ನ ಆಯ್ಕೆ ಮಾಡಿರುವುದಕ್ಕೆ ಕೆಲ ಬಿಜೆಪಿ ನಾಯಕರು ವಿರೋಧ ಮಾಡಿದ್ದು ಈ ಸಂಬಂಧ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮಾತನಾಡಿರುವ ಸಚಿವ ಎಂ.ಬಿ ಪಾಟೀಲ್, ಬಾನು ಮುಷ್ತಾಕ್ ಅವರು ಬೂಕರ್ ಪ್ರಶಸ್ತಿ ಪಡೆದವರು. ಜಾತಿ ಧರ್ಮದ ಮಧ್ಯೆ ಯಾಕೆ ತರುತ್ತೀರಾ? ನೂರಾರು ಸಮಸ್ಯಗಳಿವೆ ನಮಗೆ ಟ್ಯಾಕ್ಸ್ ಹಣ ಬಂದಿಲ್ಲ ಬಿಜೆಪಿಯವರು ಅದರ ಬಗ್ಗೆ ಮಾತನಾಡಲಿ. 2ನೇ ಏರ್ ಪೋರ್ಟ್ ಬೇಕೆಂದು ಕೇಳಲಿ . ಕೇಂದ್ರದಿಂದ ರಾಜ್ಯಕ್ಕೆ ರಸ್ತೆ ರೈಲು ತರಲಿ ಅದನ್ನ ಬಿಟ್ಟು ಬೇರೆ ಏನನ್ನೋ ಯಾಕೆ ಮಾತನಾಡುತ್ತಿದ್ದಾರೆ ಎಂದು ಕುಟುಕಿದರು.
ಧರ್ಮಸ್ಥಳ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಸಚಿವ ಎಂ.ಬಿ ಪಾಟೀಲ್, ಯಾವುದೇ ಸರ್ಕಾರವಿದ್ದರೂ ಎಸ್ ಐಟಿ ರಚನೆ ಮಾಡಬೇಕಿತ್ತು. ಅದು ಸುಳ್ಳೀರಲಿ ಸತ್ಯ ಇರಲಿ ಸುಳ್ಳು ಸತ್ಯದ ಬಗ್ಗೆ ತನಿಖೆ ನಡೆಯಬೇಕು. ಆದರೆ ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
Key words: Dasara, Banu musthak, Minister, M.B. Patil, BJP