ಬೆಂಗಳೂರು,ಜುಲೈ,25,2025 (www.justkannada.in): ಮರು ಜಾತಿಗಣತಿ ಸಮೀಕ್ಷೆಗೆ ಮುಂದಾಗಿರುವ ರಾಜ್ಯ ಸರ್ಕಾರದ ನಡೆಯನ್ನ ಟೀಕಿಸುತ್ತಿರುವ ಬಿಜೆಪಿಗೆ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ತಿರುಗೇಟು ನೀಡಿದ್ದಾರೆ.
ಈ ಕುರಿತು ಮಾತನಾಡಿದ ಸಚಿವ ಎಂ.ಬಿ ಪಾಟೀಲ್, ನಾವು ಮಾಡುತ್ತಿರುವುದು ಜಾತಿಗಣತಿ ಅಲ್ಲ. ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ. ಕೇಂದ್ರ ಸರ್ಕಾರ ಜಾತಿಗಣತಿ ಮಾಡುತ್ತಿದೆ. ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಸರ್ವೇಯಲ್ಲಿ ಬಹಳ ವ್ಯತ್ಯಾಸವಿದೆ. ರಾಜ್ಯದಲ್ಲಿ ಸಾಮಾಜಿಕ ಶೈಕ್ಷಣಿಕ ಸ್ಥಿತಿಗತಿ ತಿಳಿದುಕೊಳ್ಳುತ್ತೇವೆ. ಆದರೆ ಇದಕ್ಕೆ ಬಿಜೆಪಿ ಟೀಕಿಸುತ್ತಿದೆ. ತಕರಾರು ತೆಗೆಯೋದು ಬಿಜೆಪಿ ಸಿದ್ದಾಂತ ಎಂದು ಕಿಡಿಕಾರಿದರು.
ರಾಜ್ಯದಲ್ಲಿ ಬಿಜೆಪಿಯವರೇ ಮರು ಸಮೀಕ್ಷೆ ಮಾಡಿ ಅಂದವರು. ಈಗ ಸಮಯ ಕಡಿಮೆ ಇದೆ ಅಂದವರು ಅವರೇ. ಈ ದ್ವಂಧ್ವ ನೀತಿಯನ್ನ ಬಿಜೆಪಿ ನಿಲ್ಲಿಸಬೇಕು ಎಂದು ಸಚಿವ ಎಂ.ಬಿ ಪಾಟೀಲ್ ವಾಗ್ದಾಳಿ ನಡೆಸಿದರು.
Key words: Caste Census, BJP, dual policy, Minister, M.B. Patil