ಬೆಂಗಳೂರು,ಮೇ,6,2025 (www.justkannada.in): ಜಮ್ಮುಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಯನ್ನ ಜಗತ್ತಿನ ವಿವಿಧ ದೇಶಗಳು ಖಂಡಿಸಿದ್ದು, ಉಗ್ರರ ಸದೆ ಬಡಿಯಲು ಕೇಂದ್ರ ಸರ್ಕಾರ ತಂತ್ರ ರೂಪಿಸುತ್ತಿದ್ದು ಈ ಕುರಿತು ಪ್ರತಿಕ್ರಿಯಿಸಿರುವ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್, ಉಗ್ರರ ವಿರುದ್ದ ಹೋರಾಟಕ್ಕೆ ಕೇಂದ್ರಕ್ಕೆ ಯಾವುದೇ ತಗಾದೆ ಮಾಡದೇ ನಾವು ಬೆಂಬಲ ಕೊಡುತ್ತೇವೆ ಎಂದಿದ್ದಾರೆ.
ಈ ಕುರಿತು ಮಾತನಾಡಿರುವ ಸಚಿವ ಎಂ.ಬಿ ಪಾಟೀಲ್ , ನಮಗೆ ದೇಶ ಮೊದಲು ಪಕ್ಷ ನಂತರ. ಕೇಂದ್ರ ಸರ್ಕಾರ ಯಾವುದೇ ನಿರ್ಣಯ ತೆಗೆದುಕೊಂಡರೂ ಬೆಂಬಲವಿದೆ. ಇದನ್ನು ಖರ್ಗೆ ರಾಹುಲ್ ಸಿಎಂ ಸಚಿವರು ಸ್ಪಷ್ಟಪಡಿಸಿದ್ದಾರೆ. ಕೇಂದ್ರ ಎಲ್ಲಾ ಮಾರ್ಗಸೂಚಿಗಳನ್ನ ಪಾಲನೆ ಮಾಡುತ್ತೇವೆ ಎಂದರು.
ಪಾಕಿಸ್ತಾನ ಭಯೋತ್ಪಾದನೆಗೆ ಬೆಂಬಲ ನೀಡುತ್ತಿರುವುದು ಜಗಜ್ಜಾಹೀರು ಆಗಿದೆ. ಚುನಾವಣೆ, ಪಕ್ಷ ಬೇರೆ. ಆದರೆ ದೇಶದ ರಕ್ಷಣೆಗೆ ಭದ್ರತೆಗೆ ಎಲ್ಲಾ ರೀತಿಯ ತ್ಯಾಗ ಮಾಡಬೇಕು. ಯಾವುದೇ ತಗಾದೆ ಮಾಡದೆ ಕೇಂದ್ರಕ್ಕೆ ನಾವು ಬೆಂಬಲ ಕೊಡುತ್ತೇವೆ ಎಂದು ಸಚಿವ ಎಂ.ಬಿ ಪಾಟೀಲ್ ತಿಳಿಸಿದರು.
Key words: Our support, central government, Minister, M.B. Patil