ಯತ್ನಾಳ್ ಅಭಿವೃದ್ದಿ ಬಗ್ಗೆ ಸವಾಲ್ ಹಾಕಲಿ- ಸಚಿವ ಎಂ.ಬಿ ಪಾಟೀಲ್

ವಿಜಯಪುರ,ಮೇ,3,2025 (www.justkannada.in): ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸವಾಲು ಸ್ವೀಕರಿಸಿ ಸಚಿವ ಶಿವಾನಂದ ಪಾಟೀಲ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ವಿಚಾರ ಕುರಿತು ಸಚಿವ ಎಂ.ಬಿ ಪಾಟೀಲ್ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿದ ಸಚಿವ ಎಂ.ಬಿ ಪಾಟೀಲ್, ಶಾಸಕ  ಬಸನಗೌಡ ಪಾಟೀಲ್ ಯತ್ನಾಳ್ ಅಶ್ಲೀಲ ಪದಗಳನ್ನ ಬಳಸಿದ್ದಾರೆ.  ಯತ್ನಳ್ ಅಭಿವೃದ್ಧಿ ಬಗ್ಗೆ ಸವಾಲ್ ಹಾಕಲಿ. ಆದರೆ ಕುಟುಂಬದ ಬಗ್ಗೆ ಹಾಗೆ ಮಾತನಾಡಬಾರದು ಎಂದರು.

ಶಾಸಕ ಯತ್ನಾಳ್ , ಶಿವಾನಂದ ಪಾಟೀಲ್ ಒಳ್ಳೇಯ  ಸ್ನೇಹಿತರು. ಆದರೆ ಈಗ ಅವರ ಮಧ್ಯೆ ಏನಾಗಿದೆ ಗೊತ್ತಿಲ್ಲ ಎಂದು ಎಂಬಿ ಪಾಟೀಲ್ ತಿಳಿಸಿದರು.

Key words:  challenge, development, Yatnal, Minister, M.B. Patil