ಉತ್ತರ ಕನ್ನಡ,ಸೆಪ್ಟಂಬರ್,5,2026 (www.justkannada.in): ಸೆಪ್ಟಂಬರ್ 21 ರಿಂದ ಮೂರು ದಿನಗಳ ಕಾಲ ವಿಶೇಷ ಅಧಿವೇಶನ ಕರೆದಿರುವ ವಿಚಾರಕ್ಕೆ ಸಂಬಂಧಿಸಿಂತೆ ಬಿಜೆಪಿ ವಿರುದ್ದ ಸಹಕಾರ ಸಚಿವ ಲಕ್ಷ್ಮಣ್ ಸವದಿ ಕಿಡಿಕಾರಿದ್ದಾರೆ.
ಈ ಕುರಿತು ಮಾತನಾಡಿದ ಸಚಿವ ಲಕ್ಷ್ಮಣ್ ಸವದಿ, ಈ ಹಿಂದೆ ಕರೆದ ಅಧಿವೇಶನ ಸದ್ಬಳಕೆ ಮಾಡಿಕೊಳ್ಳಲಿಲ್ಲ. ಅಧಿವೇಶನ ಸದ್ಬಳಕೆ ಮಾಡಿಕೊಳ್ಳುವ ಸಬ್ದುದ್ದಿ ಬಿಜೆಪಿಗೆ ಇರಲಿಲ್ಲ ಎಂದು ವಾಗ್ದಾಳಿ ನಡೆಸಿದರು.
ಕಸ್ತೂರಿ ರಂಗನ್ ವರದಿ ತಿರಸ್ಕರಿಸಬೇಕಾಗಿದೆ ಈ ಭಾಗದ ಜನರನ್ನ ನಾವು ರಕ್ಷಣೆ ಮಾಡಬೇಕಾಗಿದೆ . ಕಳೆದ ಅಧಿವೇಶನದಲ್ಲಿ ಸರಿಯಾಗಿ ಚರ್ಚೆ ಮಾಡಿದ್ದರೇ ವಿಶೇಷ ಅಧಿವೇಶನ ಕರೆಯುವ ಅವಶ್ಯಕತೆ ಬರುತ್ತಿರಲಿಲ್ಲ ಎಂದು ಲಕ್ಷ್ಮಣ್ ಸವದಿ ತಿಳಿಸಿದರು.
Key words: BJP, not, good sense, use, session, Minister, Laxman Savadi







