ಸದನದಲ್ಲಿ ‘ಗೃಹಲಕ್ಷ್ಮೀ’ ಗದ್ದಲ:  ತಪ್ಪು ಮಾಹಿತಿ ನೀಡಿದ್ದಕ್ಕೆ ವಿಷಾದ ವ್ಯಕ್ತಪಡಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಬೆಳಗಾವಿ,ಡಿಸೆಂಬರ್,17,2025 (www.justkannada.in):   ಗೃಹಲಕ್ಷ್ಮೀ ಯೋಜನೆಯ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಹಣ ಫಲಾನುಭವಿಗಳಿಗೆ ಹಾಕದೆ ಬಾಕಿ ಉಳಿದಿರುವ ಬಗ್ಗೆ  ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಒಪ್ಪಿಕೊಂಡಿದ್ದು, ಸದನದಲ್ಲಿ ತಪ್ಪು ಮಾಹಿತಿ ನೀಡಿದ್ದಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ.

ಬ್ರವರಿ ಮತ್ತು ಮಾರ್ಚ್ ತಿಂಗಳ ಹಣ ಬಾಕಿ ಬಗ್ಗೆ ತಪ್ಪು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಈ ಬಗ್ಗೆ ಸಚಿವರಿಂದ ಉತ್ತರ ಕೊಡಿಸುವಂತೆ ವಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಆಗ್ರಹಿಸಿ ವಿಧಾನಸಭೆಯಲ್ಲಿ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಈ ವೇಳೆ ಸಚಿವರಿಂದ ಉತ್ತರ ಕೊಡಿಸುವ ಭರವಸೆ ನೀಡಿದ ಹಿನ್ನೆಲೆ ಬಿಜೆಪಿ,ಜೆಡಿಎಸ್ ಸದಸ್ಯರು ಪ್ರತಿಭಟನೆ ಹಿಂಪಡೆದರು.

ಈ ಬಗ್ಗೆ ಸದನದಲ್ಲಿ ಉತ್ತರ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ನನಗೆ ಸದನದಲ್ಲಿ ತಪ್ಪು ಮಾಹಿತಿ ಕೊಡುವ ಉದ್ದೇಶವಿಲ್ಲ. ಪದೇ ಪದೇ ಫೆಬ್ರವರಿ ಮಾರ್ಚ್ ತಿಂಗಳ ಹಣ ಬಗ್ಗೆ ಮಾಹಿತಿ ಕೇಳಿದ್ದು ನಾನು ಪರಿಶೀಲನೆ ನಡೆಸಿದಾಗ 3 ತಿಂಗಳ ಹಣ ವ್ಯತ್ಯಾಸ ಆಗಿದ್ದು ಗೊತ್ತಾಗಿದೆ.  ಪ್ರತಿ ತಿಂಗಳು  2ಸಾವಿರ ಹಾಕುತ್ತಿದ್ದೇವೆ. ಫೆಬ್ರವರಿ ಮಾರ್ಚ್ ತಿಂಗಳ ಹಣ ಹಾಕಿದ್ದೇವೆ ಎಂಬ ಮಾಹಿತಿ ಇತ್ತು . ನಾನು ಪುನಃ  ಚೆಕ್ ಮಾಡಿದಾಗ ವ್ಯತ್ಯಾಸವಾಗಿದೆ.  ಸದನಕ್ಕೆ ತಪ್ಪು ಮಾಹಿತಿ ಕೊಡುವ ಉದ್ದೇಶವಿಲ. ಎಲ್ಲಾ ಫಲಾನುಭವಿಗಳ ಖಾತೆಗೆ ಡಿಬಿಟಿ ಮೂಲಕ ಹಣ ಪಾವತಿಯಾಗಲಿದೆ.  ನಾನು ವಿಚಾರಿಸಿದಾಗ ಎರಡು ತಿಂಗಳ ಹಣಬಾಕಿ ಇದೆ ಎಂಬ ವಿಚಾರ ಗೊತ್ತಾಗಿದೆ. ಯಾರದೇ ಭಾವನೆಗೆ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ  ಎಂದು ಹೇಳುವ ಮೂಲಕ ಫೆಬ್ರವರಿ ಮಾರ್ಚ್ ತಿಂಗಳ ಹಣ  ಬಾಕಿ ಇರುವ ಬಗ್ಗೆ ಸದನದಲ್ಲಿ ಒಪ್ಪಿಕೊಂಡರು.

Key words: ‘Grihalakshmi scheme, session, Minister, Lakshmi Hebbalkar