ವಿಶೇಷ ಪೂಜೆ ಸಲ್ಲಿಸಿ ಅಧಿಕೃತವಾಗಿ ಕಚೇರಿಗೆ ಪ್ರವೇಶಿಸಿದ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಮತ್ತು ಸಚಿವೆ ಶಶಿಕಲಾ ಜೊಲ್ಲೆ…

ಬೆಂಗಳೂರು,ಆ,28,2019(www.justkannada.in): ಬಂದರು,ಮುಜರಾಯಿ,ಮೀನುಗಾರಿಕಾ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಅವರು ಇಂದು ವಿಶೇಷ ಪೂಜೆ ಸಲ್ಲಿಸಿ ಕಚೇರಿಗೆ ಅಧಿಕೃತ ಪ್ರವೇಶ ಮಾಡಿದರು.

ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ಕಚೇರಿಗೆ ಪೂಜೆ ಸಲ್ಲಿಸುವ ಮೂಲಕ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಪ್ರವೇಶಿಸಿದರು. ಬಳಿಕ ಮಾತನಾಡಿದ ಅವರು, ಮೂರು ಇಲಾಖೆಗಳು ನನಗೆ ಬರಲಿದೆ. ಬಂದರು, ಮುಜರಾಯಿ, ಮೀನುಗಾರಿಕೆ ಇಲಾಖೆ ಬರುತ್ತೆ. ಮೂರು ಇಲಾಖೆ ಅಧಿಕಾರಿಗಳ ಸಭೆ ನಡೆಸಿದ್ದೇನೆ. ಸೀಮೆಎಣ್ಣೆ, ಡೀಸೇಲ್ ಸಬ್ಸಿಡಿ ಬೇಡಿಕೆಯಿದೆ. ಮಹಿಳಾ ಮೀನುಗಾರರ ಸಾಲಮನ್ನಾ ಬಗ್ಗೆ ನಿರ್ಧಾರವಾಗಬೇಕು. ಮುಜರಾಯಿ ಇಲಾಖೆಯಲ್ಲಿ ಹಲವು ಸಮಸ್ಯೆಗಳಿವೆ ಎಂದರು.

ರಾಜ್ಯದಲ್ಲಿ 28 ಸಾವಿರ ದೇಗುಲಗಳಿವೆ. ದೇಗುಲಗಳ ಅರ್ಚಕರಿಗೆ 48 ಲಕ್ಷ ಸಸ್ತಿಕ್ ನೀಡಲಾಗುತ್ತಿದೆ. ಇದು ಅವರಿಗೆ ತಲುಪುತ್ತಿದೆಯೋ ಇಲ್ಲವೋ ನೋಡಬೇಕು.ಅದು ಸಂಬಂಧಿಸಿದವರಿಗೆ ತಲುಪುವಂತೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ತೇನೆ ಎಂದರು.

ಕಚೇರಿಗೆ ವಿಶೇಷ ಪೂಜೆ ಸಲ್ಲಿಸಿ ಸಚಿವೆ ಶಶಿಕಲಾ ಜೊಲ್ಲೆ  ಅಧಿಕೃತ ಎಂಟ್ರಿ…

ವಿಕಾಸಸೌಧದ ಮೊದಲ ಮಹಡಿಯಲ್ಲಿರುವ  ತಮ್ಮ ಕಚೇರಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಕಚೇರಿಗೆ ಪಾದಾರ್ಪಣೆ ಮಾಡಿದರು. ಈ ವೇಳೆ ಕ್ಷೇತ್ರದ ನೂರಾರು ಕಾರ್ಯಕರ್ತರು, ಬೆಂಬಲಿಗರು ಭಾಗಿಯಾಗಿದ್ದರು.

ಕಚೇರಿಗೆ ಪ್ರವೇಶಿಸಿದ ಬಳಿಕ ಮಾತನಾಡಿದ ಸಚಿವೆ ಶಶಿಕಲಾ ಜೊಲ್ಲೆ, ಇಂದು ಕಚೇರಿ ಉದ್ಘಾಟನೆ ಮಾಡಿದ್ದೇವೆ. ಒಂದು ಕಡೆ ಖುಷಿ, ಮತ್ತೊಂದು ಕಡೆ ದುಃಖ ಇದೆ. ಜಿಲ್ಲೆಯ ಜನ ಪ್ರವಾಹದಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ನಾನು ಚಿಕ್ಕೋಡಿ ವಿಭಾಗದಲ್ಲಿ ಪ್ರವಾಸ ಮಾಡಿದ್ದೆ. ಎಲ್ಲವನ್ನೂ ಪರಿಶೀಲಿಸಿ ಸಿಎಂಗೆ ವರದಿ ನೀಡಿದ್ದೇವೆ. ನಾನು ಮಹಿಳಾ ಕಲ್ಯಾಣ ಸಚಿವೆಯಾಗಿದ್ದೇನೆ. ಹೀಗಾಗಿ ನಾಳೆಯಿಂದ ಮತ್ತೆ ಪ್ರವಾಸ ಮಾಡ್ತೇನೆ. ಮಹಿಳೆಯರ ಬಗ್ಗೆ ವಿಶೇಷ ಕಾಳಜಿ ವಹಿಸ್ತೇನೆ ಎಂದರು.

Key words: Minister -Kota Srinivas Poojary – – Sasikala Jolle- entered – office – special worship