ಎಲ್ ಪಿಜಿ ಗ್ಯಾಸ್ ಅಭಾವ: ನಾಳೆ ಮೀಟಿಂಗ್ ಕರೆದಿದ್ದೇನೆ- ಸಚಿವ ಕೆ.ಎಚ್ ಮುನಿಯಪ್ಪ

ಬೆಂಗಳೂರು,ಏಪ್ರಿಲ್,9,2026 (www.justkannada.in):  ರಾಜ್ಯದಲ್ಲಿ ಎಲ್ ಪಿಜಿ ಗ್ಯಾಸ್ ಸಿಲಿಂಡರ್ ಅಭಾವ ಹಿನ್ನೆಲೆಯಲ್ಲಿ ನಾಳೆ ಮೀಟಿಂಗ್ ಕರೆದಿದ್ದು ಅಧಿಕಾರಿಗಳ ಜೊತೆ ಚರ್ಚಿಸುತ್ತೇನೆ ಎಂದು ಆಹಾರ ಸಚಿವ ಕೆ.ಎಚ್ ಮುನಿಯಪ್ಪ ತಿಳಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಕೆಎಚ್ ಮುನಿಯಪ್ಪ, ನಾಳೇ ಮೀಟಿಂಗ್ ಕರೆದಿದ್ದೇನೆ. ಆಟೋ ಚಾಲಕರ ಜೀವನ ಗ್ಯಾಸ್ ಮೇಲೆ ಅವಲಂಬಿತವಾಗಿದೆ. ಅನಿವಾರ್ಯವಾಗಿ ಆಟೋ ಚಾಲಕರಿಗೆ ಗ್ಯಾಸ್ ಕೊಡಬೇಕಾಗುತ್ತೆ. ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ಪ್ರಯಾರಿಟಿ ಆಧಾರದ ಮೇಲೆ ಗ್ಯಾಸ್ ಕೊಡಬೇಕೆಂದು ಮನವಿ ಮಾಡಿದ್ದೇನೆ. ಕೇಂದ್ರದಿಂದ ಏನು ಪ್ರತಿಕ್ರಿಯೆ ಬರುತ್ತೆ ಕಾದು ನೋಡುತ್ತಿದ್ದೇನೆ ಎಂದರು.

ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಸಿಲಿಂಡರ್ ಮಾರಾಟ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಕೆ.ಎಚ್ ಮುನಿಯಪ್ಪ, ಈ ಬಗ್ಗೆ ಗೃಹ ಸಚಿವರ ಜೊತೆ ಮಾತನಾಡುತ್ತೇನೆ.  ಬ್ಲಾಕ್ ಮಾರ್ಕೆಟ್ ರದ್ದು ಮಾಡಬೇಕು  ಅಂತಾ ಹೇಳುತ್ತೇನೆ ಎಂದರು.

Key words: Lack, LPG gas, meeting, tomorrow, Minister, KH Muniappa