ಐದು ವರ್ಷ ಸಿದ್ದರಾಮಯ್ಯ ಸಿಎಂ ಆಗಿರಬೇಕೆಂಬುದು ನಮ್ಮ ಅಭಿಲಾಷೆ-ಸಚಿವ ಕೆ.ವೆಂಕಟೇಶ್

ಚಾಮರಾಜನಗರ, ಅಕ್ಟೋಬರ್,7,2025 (www.justkannada.in):  ಐದು ವರ್ಷದವರೆಗೆ ಸಿದ್ದರಾಮಯ್ಯ ಸಿಎಂ ಆಗಿರುತ್ತಾರೆ. ಐದು ವರ್ಷ ಸಿದ್ದರಾಮಯ್ಯನವರೇ ಸಿಎಂ ಆಗಿರಬೇಕೆಂಬುದು ನಮ್ಮ ಅಭಿಲಾಷೆ ಎಂದು ಪಶುಸಂಗೋಪನಾ ಇಲಾಖೆ ಸಚಿವ ಕೆ.ವೆಂಕಟೇಶ್ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಕೆ.ವೆಂಕಟೇಶ್, ಮುಖ್ಯಮಂತ್ರಿ ಕುರ್ಚಿ ಖಾಲಿ ಇದ್ದರೆ ಅಲ್ವಾ ಬದಲಾಗೋದು. ಕುರ್ಚಿ ಖಾಲಿ ಆದ ಮೇಲೆ ಮಾತಾಡೋಣ ಈಗ ಯಾಕೆ ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ಓಟ್ ಗೋಯಿಂಗ್ ಸಿಎಂ ಎಂದು ಆರ್. ಅಶೋಕ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸಚಿವ ಕೆ.ವೆಂಕಟೇಶ್,  ಅವರಿಗೆ ಏನು ಕೆಲಸ. ಹೋದಲ್ಲಿ ಬಂದಲ್ಲಿ ಹೇಳೋದೆ ಆಯ್ತು. ಧರ್ಮಸ್ಥಳ ಕೇಸ್ ನಲ್ಲಿ ಏನ್ ಮೆರವಣಿಗೆ ಮಾಡಿದ್ದೇ ಮಾಡಿದ್ದು. ಅಮೇಲೆ ಏನ್ ಆಯ್ತು. ವಿರೇಂದ್ರ ಹೆಗ್ಗಡೆ ಹೇಳಿದ್ದೇನು.  ಸರ್ಕಾರ ಎಸ್ ಐಟಿ  ರಚನೆ ಮಾಡಿದ್ದು ಒಳ್ಳೆಯದಾಯಿತು ಅಂದರು. ಐದು ವರ್ಷ ಸಿದ್ದರಾಮಯ್ಯನವರೇ ಸಿಎಂ ಆಗಿರಬೇಕೆಂಬುದು  ನಮ್ಮ ಅಭಿಲಾಷೆ ಏನೇ ತೀರ್ಮಾನ ಇದ್ದರೂ ಹೈಕಮಾಂಡ್ ತೀರ್ಮಾನ ಮಾಡುತ್ತೆ ಎಂದರು.

Key words: Siddaramaiah, CM, five years, Minister, K. Venkatesh