ಬೆಂಗಳೂರು,ಮಾರ್ಚ್,9,2026 (www.justkannada.in): ಕೇರಳ ಮೂಲದ ಸಂಸ್ಥೆಯಿಂದ ವಿದ್ಯುತ್ ಟಾನ್ಸ್ ಫಾರ್ಮರ್ ಖರೀದಿಕ್ಕೆ ಸಂಬಂಧಿಸಿದಂತೆ ಇಂಧನ ಸಚಿವ ಕೆ.ಜೆ ಜಾರ್ಜ್ ಸದನದಲ್ಲಿ ಸ್ಪಷ್ಟನೆ ನೀಡಿದ್ದಾರೆ.
ರಾಜ್ಯದ ಸಂಸ್ಥೆಗಳನ್ನ ಬಿಟ್ಟು ಕೇರಳ ರಾಜ್ಯದಿಂದ ಏಕೆ ವಿದ್ಯುತ್ ಟಾನ್ಸ್ ಫಾರ್ಮರ್ ಗಳನ್ನ ಖರೀದಿಸುತ್ತಿದ್ದೀರಿ ಎಂದು ವಿಧಾನಪರಿಷತ್ ನಲ್ಲಿ ಬಿಜೆಪಿ ಸದಸ್ಯ ಎನ್.ರವಿಕುಮಾರ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಕೆ.ಜೆ ಜಾರ್ಜ್, ಕೇರಳ ಮೂಲದ ಸಂಸ್ಥೆಯಿಂದ ವಿದ್ಯುತ್ ಟಾನ್ಸ್ ಫಾರ್ಮರ್ ಖರೀದಿ ಮಾಡುತ್ತಿದ್ದೇವೆ. ಕಡಿಮೆ ದರದಲ್ಲಿ ಟ್ರಾನ್ಸ್ ಫಾರ್ಮರ್ ಖರೀದಿ ಮಾಡಿದ್ದೇವೆ. ನಮ್ಮ ಸರ್ಕಾರ ಮಾತ್ರ ಖರೀದಿ ಮಾಡಿಲ್ಲ ಬಿಜೆಪಿ ಅವಧಿಯಲ್ಲೂ ಖರೀದಿ ಮಾಡಲಾಗಿದೆ ಎಂದರು.
ಟೆಂಡರ್ ಕರೆದು ವಿದ್ಯುತ್ ಟ್ರಾನ್ಸ್ ಫಾರ್ಮರ್ ಮಾಡಲಾಗುತ್ತದೆ. ಕರ್ನಾಟಕದಲ್ಲಿ ಹೆಚ್ಚು ಸರಬರಾಜು ಇಲ್ಲದ ಕಾರಣ ಕೇರಳ ಮೂಲದ ಸಂಸ್ಥೆಯಿಂದ ಖರೀದಿ ಮಾಡಲಾಗುತ್ತಿದೆ. ಕಮಿಕಾದಿಂದ 15 ಸಾವಿರ ಟಾನ್ಸ್ ಫಾರ್ಮರ್ ಉತ್ಪಾದನೆಯಾಗುತ್ತಿದೆ. ಈಗ ಟ್ರಾನ್ಸ್ ಫಾರ್ಮರ್ ಉತ್ಪಾದನೆ 30 ಸಾವಿರಕ್ಕೆ ಏರಿಕೆ ಮಾಡಿದ್ದೇವೆ. ನಮಗೆ 50 ಸಾವಿರ ವಿದ್ಯುತ್ ಟಾನ್ಸ್ ಫಾರ್ಮರ್ ಅಗತ್ಯವಿದೆ. ಉಳಿದಂತೆ ಕೇರಳದಿಂದ ಕಡಿಮೆ ದರದಲ್ಲಿ ಖರೀದಿ ಮಾಡುತ್ತೇವೆ ಎಂದು ತಿಳಿಸಿದರು.
Key words: Minister, K.J. George, purchase, power transformer, Kerala company







