ಬೆಂಗಳೂರು,ಜನವರಿ,13,2026 (www.justkannada.in): ಸುಪ್ರೀಂಕೋರ್ಟ್ ಆದೇಶದಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚುನಾವಣೆ ನಡೆಸುತ್ತೇವೆ ಎಂದು ಇಂಧನ ಸಚಿವ ಕೆ.ಜೆ ಜಾರ್ಜ್ ತಿಳಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಕೆ.ಜೆ ಜಾರ್ಜ್, ಜಿಬಿಎ ಚುನಾವಣೆಗೆ ಕಾಂಗ್ರೆಸ್ ಎಲ್ಲಾ ಸಿದ್ದತೆ ಮಾಡಿಕೊಂಡಿದೆ ಸುಪ್ರೀಂ ಕೋರ್ಟ್ ಆದೇಶದಂತೆ ನಾವು ಚುನಾವಣೆ ನಡೆಸುತ್ತೇವೆ. 5 ಪಾಲಿಕೆಗಳ ಚುನಾವಣೆಯಲ್ಲಿ ನಾವೇ ಗೆಲ್ಲುವ ವಿಶ್ವಾಸವಿದೆ. ಬಿಜೆಪಿ, ಜೆಡಿಎಸ್ ಮೈತ್ರಿ ಇತ್ತು ನಮಗೆ ಹೊಸದಲ್ಲ ಎಂದರು.
ಸಿದ್ದರಾಮಯ್ಯ ಲೀಸ್ ಬೇಸ್ಡ್ ಸಿಎಂ ಎಂಬ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸಚಿವ ಕೆಜೆ ಜಾರ್ಜ್, ಕುಮಾರಸ್ವಾಮಿ ಹೇಳಿದ್ದಕ್ಕೆ ನಾವು ಮಾತನಾಡಲ್ಲ. ಹೆಚ್ ಡಿಕೆ ಲೀಸ್ ಬೇಸ್ಡ್ ಸಿಎಂ ಆಗಿದ್ದರು. ಹೆಚ್ ಡಿಕೆ 5 ವರ್ಷಕ್ಕೆಂದು ಸಿಎಂ ಆಗಿ ಒಂದು ವರ್ಷಕ್ಕೆ ಹೋದರು ಬಿಜೆಪಿಯಲ್ಲಿ ಎಲ್ಲಾ ಸಿಎಂಗೆ ಆದೇ ಅನುಭವ . ಆದರೆ ನಮ್ಮಲ್ಲಿ ಆ ರೀತಿ ಇಲ್ಲ. ಎಂದು ಟಾಂಗ್ ಕೊಟ್ಟರು.
Key words: GBA elections , Supreme Court, Minister, K.J. George







