ನಾವೂ ಅಭಿಪ್ರಾಯ ಹೇಳ್ತೇವೆ: ಹೈಕಮಾಂಡ್ ಆದಷ್ಟು ಬೇಗ ಗೊಂದಲ ಬಗೆಹರಿಸಲಿ- ಸಚಿವ ಕೆ.ಎಚ್ ಮುನಿಯಪ್ಪ

ಬೆಂಗಳೂರು,ನವೆಂಬರ್,28,2025 (www.justkannada.in):  ಅಧಿಕಾರ ಹಂಚಿಕೆ, ನಾಯಕತ್ವ ಬದಲಾವಣೆ ಕುರಿತು ಎದ್ದಿರುವ ಗೊಂದಲಗಳನ್ನ ಶಮನ ಮಾಡಲು ಕಾಂಗ್ರೆಸ್ ಹೈಕಮಾಂಡ್ ಗೆ ಒತ್ತಡವಿದ್ದು ಈ ಬಗ್ಗೆ ಆಹಾರ ಸಚಿವ ಕೆ.ಎಚ್ ಮುನಿಯಪ್ಪ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿರುವ ಸಚಿವ ಕೆ.ಎಚ್ ಮುನಿಯಪ್ಪ,  ನಮ್ಮನ್ನ ಕರೆದರೆ ನಾವು ಅಭಿಪ್ರಾಯ ಹೇಳುತೇವೆ. ಆದಷ್ಟು ಬೇಗ ಹೈಕಮಾಂಡ್ ಗೊಂದಲ ಬಗೆಹರಿಸಬೇಕು .  ದೆಹಲಿಗೆ ಹೋದಾಗಲೂ ನಾನು ಮನವಿ ಮಾಡಿದ್ದೆ. ಸಿಎಂ ಡಿಸಿಎಂ ಕರೆಸಿ ಹೈಕಮಾಂಡ್ ಮಾತನಾಡಬೇಕು ಎಂದರು.

ಹೈಕಮಾಂಡ್  ಆದಷ್ಟು ಬೇಗ ಸಮಸ್ಯೆ ಬಗೆಹರಿಸಬೇಕು. ಗೊಂದಲದಿಂದ ಜನರಿಗೆ ನಮ್ಮ ಸರ್ಕಾರದ ಕಾರ್ಯಕ್ರಮಗಳು ಕಾಣಿಸುತ್ತಿಲ್ಲ. ಜನ ಕಾರ್ಯಕ್ರಮಗಳನ್ನ ನೋಡುತ್ತಿಲ್ಲ.  ಗೊಂದಲಗಳ ಬಗ್ಗೆ ನೋಡುತಿದ್ದಾರೆ  ಎಂದು  ಕೆಎಚ್ ಮುನಿಯಪ್ಪ ತಿಳಿಸಿದರು.

Key words:  high command, resolve, Power Sharing, Minister, K.H. Muniyappa