ಐದು ವರ್ಷ ಸಿಎಂ ಆಗಿ ಸಿದ್ದರಾಮಯ್ಯ ಮುಂದುವರಿಕೆ: ಯಾವುದೇ ಬದಲಾವಣೆ ಇಲ್ಲ- ಸಚಿವ ಕೆ.ಎಚ್ ಮುನಿಯಪ್ಪ

ಕೋಲಾರ,ಅಕ್ಟೋಬರ್,28,2025 (www.justkannada.in): ಐದು ವರ್ಷ ಸಿಎಂ ಆಗಿ ಸಿದ್ದರಾಮಯ್ಯ ಮುಂದುವರೆಯುತ್ತಾರೆ. ಸದ್ಯಕ್ಕೆ ಯಾವುದೇ ಬದಲಾವಣೆ ಇಲ್ಲ ಎಂದು ಆಹಾರ ಸಚಿವ ಕೆ.ಎಚ್ ಮುನಿಯಪ್ಪ ಸ್ಪಷ್ಟಪಡಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಕೆ.ಎಚ್ ಮುನಿಯಪ್ಪ, ಪಕ್ಷ ಬಲಪಡಿಸಿ ಅಧಿಕಾರಕ್ಕೆ ತರುವಲ್ಲಿ ಅವರ ಶ್ರಮ ಇದೆ .ಅಧ್ಯಕ್ಷರಾದಿಯಾಗಿ ಸಾಕಷ್ಟು ಜನರು ಅರ್ಹರಿದ್ದಾರೆ.  ಆದರೆ ಬೆಳಗಾದ್ರೆ ದಾರಿತಪ್ಪಿಸವ ಕೆಲಸ ನಡೆಯುತ್ತಿದೆ.  ಸಿಎಂ ಬದಲಾವಣೆ ಬಗ್ಗೆ ಚರ್ಚೆ ಮಾಡಲ್ಲ. ಸಿಎಂ ಬದಲಾವಣೆ ವಿಚಾರ ಮಾತನಾಡುವುದು ಅಪ್ರಸ್ತುತ. 136 ಶಾಸಕರಾಗಿ ಗೆದ್ದಿದ್ದೇವೆ. ಅದಕ್ಕೆ ನಾಯಕತ್ವ ಬೇಕು ಎಂದರು.

ಕೆಎಚ್ ಮುನಿಯಪ್ಪ ಸಿಎಂ ಆದರೆ ಸ್ವಾಗತ ಎಂಬ ಸಚಿವ ಪರಮೇಶ್ವರ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸಚಿವ ಕೆ.ಎಚ್ ಮುನಿಯಪ್ಪ, ಪರಮೇಶ್ವರ್ ಅತ್ಯಂತ ಹಿರಿಯ ನಾಯಕರು.  8 ವರ್ಷ ಕೆಪಿಸಿಸಿ ಅಧ್ಯಕ್ಷರಾಗಿ ಅತ್ಯುತ್ತಮ ಆಡಳಿತ ನೀಡಿದರು. ನಾವೆಲ್ಲರೂ ಒಟ್ಟಾಗಿ ಸೇರಿ ಹೈಕಮಂಡ್ ನಿರ್ಧಾರಕ್ಕೆ ಬದ್ದ ಸಿಎಂ ಸ್ಥಾನ ತೀರ್ಮಾನ ಮಾಡುವುದು ಹೈಕಮಾಂಡ್ ನಾನು ಸಿಎಂಗೆ ರೆಡಿ ಇದ್ದೀನಿ ಎಂದು ಬರೆಯಲು ಅವಕಾಶವಿಲ್ಲ ಸಿಎಂ ಆಗುವ ಆಸೆ ಏನೂ ಇಲ್ಲ ಎಂದು ತಿಳಿಸಿದರು.

Key words: CM, Siddaramaiah, continue,  Minister, K.H. Muniyappa