ಸಚಿವ ಮಾಧುಸ್ವಾಮಿಗೆ ತುಮಕೂರು ಜಿಲ್ಲಾ ಉಸ್ತುವಾರಿ ನೀಡುವಂತೆ ಒತ್ತಾಯ: ಹೋರಾಟದ ಎಚ್ಚರಿಕೆ.

ತುಮಕೂರು,ಜನವರಿ,27,2022(www.justkannada.in): ಸಚಿವ ಮಾಧುಸ್ವಾಮಿಗೆ ತುಮಕೂರು ಜಿಲ್ಲಾ ಉಸ್ತುವಾರಿ ನೀಡುವಂತೆ ಅವರ ಬೆಂಬಲಿಗರು ಒತ್ತಾಯಿಸಿದ್ದು ಇಲ್ಲದಿದ್ದರೇ ಹೊರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಸಿಎಂ ಬಸವರಾಜ ಬೊಮ್ಮಾಯಿ ಇತ್ತೀಚೆಗೆ ಸಚಿವರ ಜಿಲ್ಲಾ ಉಸ್ತುವಾರಿ ಬದಲಾಯಿಸಿದ್ದರು. ಈ ಮಧ್ಯೆ ಸಚಿವರಾದ ಮಾಧುಸ್ವಾಮಿ ಮತ್ತು ಆರ್.ಅಶೋಕ್ ಗೆ ಜಿಲ್ಲಾ ಉಸ್ತುವಾರಿ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಕೂಡಲೇ ಸಚಿವ ಮಾಧುಸ್ವಾಮಿಗೆ ತುಮಕೂರು ಜಿಲ್ಲಾ ಉಸ್ತುವಾರಿ ನೀಡುವಂತೆ ಅವರ ಬೆಂಬಲಿಗರು ಆಗ್ರಹಿಸಿದ್ದಾರೆ.

ಮಾಧುಸ್ವಾಮಿ ಜಿಲ್ಲೆಯಲ್ಲಿ ಜಾತ್ಯಾತೀತವಾಗಿ ಕೆಲಸ ಮಾಡುತ್ತಿದ್ದಾರೆ.  ನಿಷ್ಟಾವಂತ ಸಮರ್ಥ ನಾಯಕ ಮಾಧುಸ್ವಾಮಿ.  ಅಂತವರಿಹ ಉಸ್ತುವಾರಿ ನೀಡದಿರುವುದು ನೋವು ತರಿಸಿದೆ.  ಮಾಧುಸ್ವಾಮಿ ಅವರಿಗೆ ತುಮಕೂರು ಜಿಲ್ಲೆ ಬಗ್ಗ ಸಮಗ್ರ ಮಾಹಿತಿ ಗೊತ್ತಿದೆ. ಹೀಗಾಗಿ ಮಾಧುಸ್ವಾಮಿ ಅವರಿಗೆ ಉಸ್ತುವಾರಿ ನೀಡಬೇಕಿತ್ತು ಅದು ಬಿಟ್ಟು ಬೇರೆಯವರಿಗೆ ಉಸ್ತುವಾರಿ ನೀಡಿದ್ದು ಸರಿಯಲ್ಲ ಎಂದು ಬೆಂಬಲಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೂಡಲೇ ಮಾಧುಸ್ವಾಮಿಗೆ ಉಸ್ತುವಾರಿ ನೀಡಿ. ನೀಡದಿದ್ದರೇ ಹೋರಾಟ ಮಾಡುವುದಾಗಿ ಚಿಕ್ಕನಾಯಕನಹಳ್ಳಿಯ ಮಾಧುಸ್ವಾಮಿ ಅವರ ಬೆಂಬಲಿಗರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

Key words: minister-JC Madushwamy-tumkur

ENGLISH SUMMARY…

Demand to give Minister Madhuswamy as Tumakuru District In-charge portfolio: Warns of a struggle
Tumakuru, January 27, 2022 (www.justkannada.in): Supporters of Minister Madhuswamy have demanded the Chief Minister to give him the Tumakuru District In-charge portfolio and have warned to protest in case their demand is not met.
Chief Minister Basavaraj Bommai had recently shuffled the cabinet. R. Ashok and Madhuswamy have not given any district in-charge portfolios. In this context, the supporters of Madhuswamy have demanded the Chief Minister to give him the Tumakuru District In-charge portfolio.
Keywords: Minister Madhuswamy/ supporters demand/ Tumakuru District In-charge portfolio