ಬಿಜೆಪಿಯವರು ಒಂದೇ ಒಂದು ಮನೆ ಕೊಟ್ಟಿದ್ರೆ ಇಂದೇ ರಾಜೀನಾಮೆ- ಸಚಿವ ಜಮೀರ್ ಓಪನ್ ಚಾಲೆಂಜ್

  ಕೊಪ್ಪಳ, ಅಕ್ಟೋಬರ್,6,2025 (www.justkannada.in):  ಬಿಜೆಪಿಯವರು ಒಂದೇ ಒಂದು ಮನೆ ಕೊಟ್ಟಿದ್ದು ಸಾಬೀತಾದರೇ ಇಂದೇ ನಾನು ರಾಜೀನಾಮೆ ನೀಡುತ್ತೇನೆ ಎಂದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಓಪನ್ ಚಾಲೆಂಜ್ ಹಾಕಿದರು.

ಕೊಪ್ಪಳದಲ್ಲಿ ಇಂದು ಮಾತನಾಡಿದ ಸಚಿವ ಜಮೀರ್ ಅಹ್ಮದ್ ಖಾನ್,  ಧಮ್ ತಾಕತ್ತು ಬಗ್ಗೆ ವಿಪಕ್ಷ ನಾಯಕ ಆರ್.ಅಶೋಕ್ ಮಾತನಾಡುತ್ತಾರೆ. ನಾನು ಬಿಜೆಪಿ ನಾಯಕರಿಗೆ ಓಪನ್ ಚಾಲೆಂಜ್ ಹಾಕುತ್ತೇನೆ ಒಂದೇ ಒಂದು ಮನೆ ಕೊಟ್ಟಿದ್ದು ಸಾಬೀತು ಮಾಡಿದರೆ ರಾಜೀನಾಮೆ ಕೊಡುತ್ತೇನೆ.  ಇಂದು ಸಂಜೆಯೇ ರಾಜ್ಯಪಾಲರಿಗೆ ರಾಜೀನಾಮೆ ನೀಡುತ್ತೇನೆ ಎಂದರು.

ಬಿಜೆಪಿಯವರದ್ದು ಬರೀ ಸುಳ್ಳು ಈ ಹಿಂದೆ ಹೆಗಡೆ ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದ್ದಿದ್ದರು  ಅಂಬೇಡ್ಕರ್ ಸಂವಿಧಾನ ಕೊಟ್ಟಿದ್ದಕ್ಕೆ ನಾವು ಇಲ್ಲಿ ಕುಳಿತಿರುವುದು.  ಸಿಎಂ ಸಿದ್ದರಾಮಯ್ಯ ಎಲ್ಲಾ ಗ್ಯಾರಂಟಿಗಳನ್ನ ಜಾರಿ ಮಾಡಿದ್ದಾರೆ.  6ನೇ ಗ್ಯಾರಂಟಿ ವಸತಿ ಯೋಜನೆ ಎಂದು ನಾನು ಹೇಳುತ್ತೇನೆ ಎಂದು  ಜಮೀರ್ ಅಹ್ಮದ್ ಖಾನ್ ತಿಳಿಸಿದರು.

Key words:  BJP, one house, I will, resign, today, Minister, Jameer Ahamad Khan