ಮೋದಿ ಪ್ರಧಾನಿಯಾಗಿ 11 ವರ್ಷ ಆಗಿದೆ: 15 ಲಕ್ಷ ಹಣ ಎಲ್ಲಿ..? ಸಚಿವ ಜಮೀರ್ ಟೀಕೆ

ಮಂಡ್ಯ, ಅಕ್ಟೋಬರ್,4,2025 (www.justkannada.in): ನರೇಂದ್ರ ಮೋದಿ ಅವರು ಪ್ರಧಾನಿಯಾಗಿ 11 ವರ್ಷ ಕಳೆದಿದೆ.  ಅಧಿಕಾರಕ್ಕೆ ಬಂದರೆ ಎಲ್ಲರ ಖಾತೆಗೆ 15 ಲಕ್ಷ ಹಾಕುತ್ತೇನೆ ಎಂದು ಮೋದಿ ಹೇಳಿದ್ದರು. ಆ 15 ಲಕ್ಷ ಹಣ ಎಲ್ಲಿ ಎಂದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಟೀಕಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಜಮೀರ್ ಅಹ್ಮದ್ ಖಾನ್,  ನಮ್ಮ ಗ್ಯಾರಂಟಿ ಯೋಜನೆಗಳ ಬಗ್ಗೆ ಬಿಜೆಪಿಯವರು ಟೀಕಿಸಿದ್ದರು. ಆದರೆ ನಾವು 5 ಗ್ಯಾರಂಟಿಗಳನ್ನ ಅನುಷ್ಟಾನಗೊಳಿಸಿದ್ದೇವೆ. ಸಿಎಂ ಸಿದ್ದರಾಮಯ್ಯ ಈ ಹಿಂದೆ ಸ್ಲಂ ಬೋರ್ಡ್ ನಿಂದ ಮನೆಗಳನ್ನ ನೀಡಿದ್ದರು ನಾವು ಮತ್ತೆ ಅಧಿಕಾರಕ್ಕೆ ಬಂದ ನಂತರ 39,700 ಮನೆಗಳನ್ನ ನೀಡಿದ್ದೇವೆ.

ರಾಜೀವ್ ಗಾಂಧಿ ವಸತಿ ಯೋಜನೆಯಲ್ಲಿ 800 ಮನೆಗಳನ್ನ ನೀಡಿದ್ದೇವೆ. ಬಿಜೆಪಿ ಅವಧಿಯಲ್ಲಿ ಯಾಕೆ ಒಂದೇ ಒಂದು ಮನೆ ನೀಡಿಲ್ಲ. ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ಗೆ  ಮಾತ್ರ ಬಡವರ ಬಗ್ಗೆ ಕಾಳಜಿ ಇದೆ.  ನವೆಂಬರ್ ತಿಂಗಳಲ್ಲಿ ಮತ್ತೆ ಬಡವರಿಗೆ ಮನೆ ಹಂಚುತ್ತೇವೆ ಎಂದು ಸಚಿವ  ಜಮೀರ್ ಅಹ್ಮದ್ ಖಾನ್ ತಿಳಿಸಿದರು.

Key words: Prime Minister, Modi, 15 lakh, Money, Minister, Jameer