ಬೆಂಗಳೂರು,ಅಕ್ಟೋಬರ್,6,2025 (www.justkannada.in): ವೀರಶೈವ-ಲಿಂಗಾಯತರು ಸುಧಾರಿಸಿದರೆ ರಾಜ್ಯ ಸುಧಾರಿಸುತ್ತದೆ, ವೀರಶೈವ ಲಿಂಗಾಯತರು ಕೆಟ್ಟರೆ ಇಡೀ ರಾಜ್ಯವೇ ಹಾಳಾಗುತ್ತದೆ ಎಂಬ ಜನಜನಿತ ಹೇಳಿಕೆ ಇದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಈಶ್ವರ್ ಖಂಡ್ರೆ, ವೀರಶೈವ -ಲಿಂಗಾಯತರನ್ನು ಬೇರೆ ಮಾಡಲು ಯಾವುದೇ ಶಕ್ತಿಗೂ ಸಾಧ್ಯವಿಲ್ಲ. ಇಬ್ಬರೂ ಒಂದೇ ಎಂದು ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿ ಅವರೇ ಪ್ರತಿಪಾದಿಸಿದ್ದಾರೆ. ನಮ್ಮ ಸಮುದಾಯದ ಒಗ್ಗಟ್ಟಿನಲ್ಲಿ ಬಲವಿದೆ. ವಿಘಟನೆಯಲ್ಲಿ ಸೋಲಿದೆ. ವೀರಶೈವ-ಲಿಂಗಾಯತ ಸಮಾನಾರ್ಥಕ ಪದಗಳು. ಇಷ್ಟಲಿಂಗ ಪೂಜೆ ಮಾಡುವವರು ಮತ್ತು ಅಷ್ಟಾವರ್ಣ ಪಂಚಾಚಾರ ಷಟಸ್ಥಳ ಆಚರಣೆ ಮಾಡುವ ಗುರುಗಳು ಮತ್ತು ವಿರಕ್ತರೂ ಇದ್ದಾರೆ. ಹೀಗಾಗಿ ವೀರಶೈವರು ಮತ್ತು ಲಿಂಗಾಯತರು ಒಟ್ಟಿಗೆ ಇರಬೇಕು ಎಂಬುದು ಸಭಾದ ಸ್ಪಷ್ಟ ನಿಲುವಾಗಿದೆ ಎಂದು ತಿಳಿಸಿದರು.
ಸರ್ಕಾರಕ್ಕೂ ಪ್ರತ್ಯೇಕ ಧರ್ಮದ ವಿಚಾರಕ್ಕೂ ಯಾವುದೇ ಸಂಬಂಧವಿಲ್ಲ. ಸಿಎಂ ಸಿದ್ದರಾಮಯ್ಯ ಜನ ಸಮುದಾಯದ ನಾಯಕರಾಗಿದ್ದಾರೆ. ಕೆಲವರು ರಾಜಕೀಯ ದುರುದ್ದೇಶದಿಂದ ಅಪಪ್ರಚಾರ ಮಾಡುತ್ತಿದ್ದಾರೆ. ಬಸವಾದಿ ಶರಣರು ಸಮಸಮಾಜದ ಭವ್ಯ ಕನಸು ಕಂಡಿದ್ದರು. ಅದನ್ನೇ ಸಿಎಂ ಪಾಲನೆ ಮಾಡುತ್ತಿದ್ದಾರೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಕೊಡಿಸಲು ಶ್ರಮಿಸುತ್ತಿದ್ದಾರೆ ಎಂದರು.
Key words: Veerashaiva Lingayats, bad, state , ruined, Minister, Ishwar Khandre