ಬೆಂಗಳೂರು,ಜುಲೈ,23,2025 (www.justkannada.in): ಡಿಸೆಂಬರ್ ವೇಳೆಗೆ ಡಿಕೆ ಶಿವಕುಮಾರ್ ಸಿಎಂ ಆಗಲಿದ್ದಾರೆ ಎಂಬ ಬಸವರಾಜು ಶಿವಗಂಗಾ ಪರೋಕ್ಷ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಅರಣ್ಯ ಸಚಿವ ಈಶ್ವರ್ ಖಂಡ್ರೆ ರಾಜ್ಯದಲ್ಲಿ ಒಳ್ಳೆಯ ಆಡಳಿತ ನೀಡುತ್ತಿದ್ದೇವೆ. ಹೀಗಾಗಿ ಸಿಎಂ ಬದಲಾವಣೆ ಬಗ್ಗೆ ಪ್ರಸ್ತಾಪದ ಅವಶ್ಯಕತೆ ಇಲ್ಲ ಎಂದಿದ್ದಾರೆ.
ಈ ಕುರಿತು ಮಾತನಾಡಿದ ಸಚಿವ ಈಶ್ವರ್ ಖಂಡ್ರೆ, ಈ ವಿಷಯದ ಬಗ್ಗೆ ನಮ್ಮ ವರಿಷ್ಠರು ಈಗಾಗಲೇ ಮಾತಾಡಿದ್ದಾರ ತುಟಿಕ್ ಪಿಟಿಕ್ ಎನ್ನಬಾರದು ಎಂದು ಹೈಕಮಾಂಡ್ ಹೇಳಿದೆ. ಕೊಟ್ಟ ಮಾತಿನಂತೆ ನಾವು ಒಳ್ಳೆಯ ಆಡಳಿತ ಕೊಡುತ್ತಿದ್ದೇವೆ. ಈ ಬಗ್ಗೆ ಪ್ರಸ್ತಾಪ ಬರುವ ಅವಶ್ಯಕತೆ ಇಲ್ಲ ಬಸವರಾಜು ಶಿವಗಂಗ ಹೇಳಿಕೆ ಬಗ್ಗೆ ಹೈಕಮಾಂಡ್ ಗಮನದಲ್ಲಿದೆ. ಹೈಕಮಾಂಡ್ ನವರೇ ನೋಡಿಕೊಳ್ತಾರೆ ಎಂದರು.
Key words: No need, change, CM, Minister, Ishwar Khandre