ಬೆಳಗಾವಿ,ಡಿಸೆಂಬರ್,9,2025 (www.justkannada.in): ರೈತರ ಪರವಾಗಿ ಸುವರ್ಣ ಸೌಧದ ಬಳಿ ಬಿಜೆಪಿ ಪ್ರತಿಭಟನೆ ಹಿನ್ನೆಲೆಯಲ್ಲಿ ಕಾನೂನು ಸಚಿವ ಹೆಚ್.ಕೆ ಪಾಟೀಲ್ ಟೀಕಿಸಿದ್ದಾರೆ.
ಈ ಕುರಿತು ಮಾತನಾಡಿರುವ ಸಚಿವ ಹೆಚ್.ಕೆ ಪಾಟೀಲ್, ರಾಜ್ಯ ಸರ್ಕಾರದ ವಿರುದ್ದ ಯಾವ ನೈತಿಕೆಯಿಂದ ಬಿಜೆಪಿ ಪ್ರತಿಭಟನೆ ಮಾಡುತ್ತಿದೆ. ಇದು ರಾಜಕೀಯ ಪ್ರತಿಭಟನೆ ಅಷ್ಟೆ. ಮೆಕ್ಕೆ ಜೋಳ ಕಬ್ಬು ಬೆಳೆಗಾರರ ಸಮಸ್ಯೆ ನಿವಾರಣೆ ಆಗಿದೆ. ಕೇಂದ್ರ ಸರ್ಕಾರದ ಲೋಪ ಇದೆ ಆ ಬಗ್ಗೆ ಮಾತನಾಡಲಿ ಎಂದರು.
ಸಿಎಂ ಬದಲಾವಣೆ ವಿಚಾರ ಸಂಬಂಧ ಹೈಕಮಾಂಡ್ ನಾಯಕರು ಏನು ಮಾತನಾಡಬೇಡಿ ಎಂದಿದ್ದಾರೆ ನಾನು ಏನು ಮಾತನಾಡಲ್ಲ ಹೈಕಮಂಡ್ ತಿರ್ಮಾನಿಸುತ್ತೆ ಎಂದರು.
ಸಿಎಂ ಆಗಲು ಹೆಚ್ ಕೆ ಪಾಟೀಲ್ ಅರ್ಹರು ಎಂಬ ಕೆಎನ್ ರಾಜಣ್ಣ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಹೆಚ್ ಕೆ ಪಾಟೀಲ್, ರಾಜಣ್ಣ ನನಗೆ ಬಹಳ ಆತ್ಮೀಯ ಸ್ನೇಹಿತರು ಸಿಎಂ ಸ್ಥಾನ ಖಾಲಿ ಆಗಿ ಹೈಕಮಾಂಡ್ ಹೇಳಿದ್ರೆ ವಿಚಾರ ಬರುತ್ತೆ ಎಂದರು.
Key words: Political, protest, BJP, Minister, HK Patil







