ಇಬ್ಬರು ರಾಜಕಾರಣಿಗಳು ಬಡಿದಾಡುತ್ತಿದ್ರೆ ಅದು ಕ್ರಾಂತಿನಾ? ಸಚಿವ ಹೆಚ್.ಕೆ ಪಾಟೀಲ್

ಬೆಂಗಳೂರು,ನವೆಂಬರ್,1,2025 (www.justkannada.in):  ರಾಜ್ಯದಲ್ಲಿ ನವೆಂಬರ್ ಕ್ರಾಂತಿ ಬಗ್ಗೆ ಸುದ್ದಿಯಾಗುತ್ತಲೇ ಇದ್ದು ಇದೀಗ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಖಾರವಾಗಿ ಉತ್ತರಿಸಿದ ಕಾನೂನು ಸಚಿವ ಹೆಚ್.ಕೆ ಪಾಟೀಲ್, ನಿಮ್ಮ ಪ್ರಕಾರ ಕ್ರಾಂತಿ ಅಂದ್ರೆ ಏನು? ಇಬ್ಬರು ರಾಜಕಾರಣಿಗಳು ಬಡಿದಾಡುತ್ತಿದ್ದರೇ ಅದು ಕ್ರಾಂತಿನಾ? ಎಂದು ಮರುಪ್ರಶ್ನಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಹೆಚ್.ಕೆ ಪಾಟೀಲ್, ಈಗಾಗಲೇ ನವೆಂಬರ್ ಕ್ರಾಂತಿ ಆಗಿದೆ.  ನವೆಂಬರ್ ಒಳಗೆ ಬಡತನ ನಿರ್ಮೂಲನೆ ಮಾಡಿದ್ದೇವೆ. ಬಡತನ ಸಂಪೂರ್ಣವಾಗಿ ತೊಲಗುವ ಹಾಗೆ ಮಾಡಿದ್ದೇವೆ. ರಾಜ್ಯದಲ್ಲಿ ವಾರ್ಷಿಕ 60 ಸಾವಿರ ರೂ. ಆದಾಯ ಹೆಚ್ಚಳವಾಗುವಂತೆ ಮಾಡಿದ್ದೇವೆ  ಬಡವ ಇಲ್ಲ ಎಂದು ಹೇಳುವ ಹಾಗೆ ಮಾಡಿದ್ದೇವೆ. ಇದು ಕ್ರಾಂತಿ ಅಲ್ವಾ ನಿಮ್ಮ ಪ್ರಕಾರ ಕ್ರಾಂತಿ ಅಂದರೆ ಏನು?    ರಾಜಕಾರಣಿಗಳು ಬಡಿದಾಡುತ್ತಿದ್ದರೇ ಅದು ಕ್ರಾಂತಿನಾ..? ಎಂದು ಚಾಟಿ ಬೀಸಿದರು.

ನಾಯಕತ್ವ ಬದಲಾವಣೆ ಬಗ್ಗೆ  ಮಲ್ಲಿಕಾರ್ಜುನ ಖರ್ಗೆ ಹೇಳಿದರೆ  ಅದಕ್ಕೆ ಒಂದು ಕಿಮ್ಮತ್ತಿರುತ್ತೆ.  ಖರ್ಗೆ ವಾರಕ್ಕೊಮ್ಮೆ ಬರುತ್ತಾರೆ.  ಹಾಗೆನಾದರೂ ಇದ್ದರೆ ಹೇಳುತ್ತಿದ್ದರು ಎಂದು  ಸಚಿವ ಹೆಚ್.ಕೆ ಪಾಟೀಲ್ ತಿಳಿಸಿದರು.

Key words: November revolution, Minister,  HK Patil