ಬೆಂಗಳೂರು,ಜುಲೈ,22, 2025 (www.justkannada.in): ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಇಡಿ ಅರ್ಜಿಯನ್ನ ಸುಪ್ರೀಂಕೋರ್ಟ್ ವಜಾಗೊಳಿಸಿದ ಸಂಬಂಧ ಇನ್ನಾದರೂ ಬಿಜೆಪಿ ತಪ್ಪು ಒಪ್ಪಿಕೊಂಡು ಕ್ಷಮೆ ಕೇಳುವ ಕೆಲಸ ಮಾಡಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ ಮಹದೇವಪ್ಪ ತಿಳಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತಾಡಿದ ಸಚಿವ ಡಾ ಹೆಚ್ ಸಿ ಮಹಾದೇವಪ್ಪ, ಮುಡಾ ಪ್ರಕರಣಕ್ಕೆ ಸಂಬಂಧಿದಂತೆ ವಿಚಾರಣೆ ನಡೆಸುವಾಗ ಸುಪ್ರೀಂ ಕೋರ್ಟ್ ರಾಜಕೀಯ ವಿಷಯಗಳಿಗೆ ಸರ್ಕಾರಿ ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿರುವುದಕ್ಕೆ ಕೇಂದ್ರ ಸರ್ಕಾರವನ್ನ ತರಾಟೆಗೆ ತೆಗೆದುಕೊಂಡಿದೆ. ಇನ್ನಾದರೂ ರಾಜ್ಯದ ಬಿಜೆಪಿ ನಾಯಕರು ತಮ್ಮ ಮೊಂಡುವಾದವನ್ನು ಬಿಡಬೇಕು. ಬಿಜೆಪಿ ಸರ್ಕಾರ ಸಾಂವಿಧಾನಿಕ ಸಂಸ್ಥೆಯನ್ನ ದುರ್ಬಳಕೆ ಮಾಡಿಕೊಂಡಿದೆ. ಪಾದಯಾತ್ರೆ ಮಾಡಿ ಸರ್ಕಾರ ಅಸ್ಥಿರ ಗೊಳಿಸುವ ಕೆಲಸ ಮಾಡಿದರು ಈಗ ಸುಪ್ರೀಂಕೋರ್ಟ್ ತೀರ್ಪು ಕೊಟ್ಟಿದೆ ಬಿಜೆಪಿ ತಪ್ಪನ್ನು ಒಪ್ಪಿಕೊಂಡು ಕ್ಷಮೆ ಕೇಳಲಿ ಎಂದರು.
ಸಿದ್ದರಾಮಯ್ಯ ಅವರನ್ನ 40 ವರ್ಷಗಳಿಂದ ಬಲ್ಲೆ, ಅವರು ಯಾವತ್ತೂ ಸ್ವಜನ ಪಕ್ಷಾಪಾತ ಮಾಡಿದವರಲ್ಲ. ವಿನಾಕಾರಣ ಬಿಜೆಪಿ ನಾಯಕರು ಅವರ ಮತ್ತು ಕುಟುಂಬದವರ ನೆಮ್ಮದಿಯನ್ನು ಹಾಳು ಮಾಡಿದರು, ಸಿದ್ದರಾಮಯ್ಯ ಒಬ್ಬ ವ್ಯಕ್ತಿಯಲ್ಲ, ಒಂದು ಸರ್ಕಾರದ ಮುಖ್ಯಸ್ಥ, ಪ್ರಜಾಪ್ರಭುತ್ವವ ವ್ಯವಸ್ಥೆಯಲ್ಲಿ ಬಿಜೆಪಿಗೆ ನಂಬಿಕೆಯಿಲ್ಲ ಅನ್ನೋದು ಅವರು ಆಡುವ ಆಟಗಳಿಂದ ಗೊತ್ತಾಗುತ್ತದೆ ಎಂದು ವಾಗ್ದಾಳಿ ನಡೆಸಿದರು.
Key words: Muda case, Supreme Court, ED, BJP – Minister, HC Mahadevappa