ಧರ್ಮಸ್ಥಳ ವಿಚಾರದಲ್ಲಿ ರಾಜಕೀಯ ಮಾಡಿದ್ರೆ ಪಾಪದ ಕೆಲಸ ಮಾಡಿದಂತೆ- ಸಚಿವ ಹೆಚ್.ಕೆ ಪಾಟೀಲ್

ಬೆಂಗಳೂರು,ಆಗಸ್ಟ್,25,2025 (www.justkannada.in): ಧರ್ಮಸ್ಥಳ ವಿಚಾರದಲ್ಲಿ ರಾಜಕೀಯ ಮಾಡಬಾರದು.  ರಾಜಕೀಯ ಮಾಡಿದರೆ ಪಾಪದ ಕೆಲಸ ಮಾಡಿದಂತೆ ಎಂದು  ಕಾನೂನು ಸಚಿವ ಹೆಚ್.ಕೆ ಪಾಟೀಲ್ ತಿಳಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿ ಬಿಜೆಪಿಯ ಧರ್ಮರಕ್ಷಣಾ ಹೋರಾಟಕ್ಕೆ ತಿರುಗೇಟು ನೀಡಿದ ಸಚಿವ ಹೆಚ್.ಕೆ ಪಾಟೀಲ್,  ಧರ್ಮಸ್ಥಳಕ್ಕೆ ಕಳಂಕ ಕಪ್ಪು ಚುಕ್ಕೆ ತರಲು ಯತ್ನಿಸಿದರು.  ತಾಂತ್ರಿಕವಾಗಿ ಕಾನೂನಾತ್ಮಕವಾಗಿ ಪ್ರಯತ್ನದಿಂದ ತಪ್ಪು ಎಂದು ಸಾಬೀತಾಗಿದೆ. ಧರ್ಮಸ್ಥಳದ ಭಕ್ತರಿಗೆಲ್ಲ ಸಮಾಧಾನ ಹಾಗೂ ನೆಮ್ಮದಿ ಮೂಡಿದೆ.  ಧರ್ಮಸ್ಥಳ ಎಂಬ ವಿಷಯ ಶ್ರದ್ದೆ ಮೇಲೆ ಅವಲಂಬಿತವಾಗಿದೆ.

ಇದರಲ್ಲಿ ರಾಜಕಾರಣ ಮಾಡಬಾರದು.  ಮಾಡಿದರೆ ಪಾಪದ ಕೆಲಸ ಮಾಡಿದಂತೆ ಎಂದು ಸಚಿವ ಹೆಚ್.ಕೆ ಪಾಟಲ್ ತಿಳಿಸಿದರು.

Key words:  politics, Dharmasthala, Minister, H.K. Patil