Sunday, August 2, 2026

BDA Apartments

Home Front Page ಸುಳ್ಳು ಹೇಳಿದ್ರೆ ಸಸ್ಪೆಂಡ್ ಮಾಡ್ತೀನಿ-ಮೈಸೂರಿನಲ್ಲಿ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅಧಿಕಾರಿಗಳಿಗೆ ಫುಲ್ ಕ್ಲಾಸ್

ಸುಳ್ಳು ಹೇಳಿದ್ರೆ ಸಸ್ಪೆಂಡ್ ಮಾಡ್ತೀನಿ-ಮೈಸೂರಿನಲ್ಲಿ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅಧಿಕಾರಿಗಳಿಗೆ ಫುಲ್ ಕ್ಲಾಸ್

ಮೈಸೂರು,ಜೂ,20,2019(www.justkannada.in): ಮೈಸೂರಿನಲ್ಲಿ ಪ್ರಗತಿ ಪರಿಶೀಲನೆ ಸಭೆಯಲ್ಲಿ  ಜಿಲ್ಲಾ ಉಸ್ತುವಾರಿ ಸಚಿವ ಸರಿಯಾಗಿ ಮಾಹಿತಿ ನೀಡದ ಅಧಿಕಾರಿಗಳಿಗೆ ಫುಲ್ ಕ್ಲಾಸ್ ತೆಗೆದುಕೊಂಡ ಘಟನೆ ನಡೆಯಿತು.

ಮೈಸೂರಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕಂದಾಯ ಸಚಿವ ಆರ್.ವಿ ದೇಶಪಾಂಡೆ ಹಾಗೂ ಜಿಲ್ಲಾ ಉಸ್ತುವಾರಿ ಜಿಟಿ ದೇವೇಗೌಡರ  ನೇತೃತ್ವದಲ್ಲಿ  ಪ್ರಗತಿ ಪರಿಶೀಲನಾ ಸಭೆ ನಡೆಯಿತು.  ಈ ವೇಳೆ ಅಧಿಕಾರಿಯೊಬ್ಬರಿಗೆ ತರಾಟೆ ತೆಗೆದುಕೊಂಡ ಸಚಿವ ಜಿ.ಟಿ ದೇವೇಗೌಡ, ಮೇ ವರೆಗಿನ ಕಂದಾಯ ಪೂರ್ತಿ ಬಿಲ್ ಆಗಿದ್ಯಾ…? ಅದನ್ನ ತೋರ್ಸಿದೀಯಾ…? ನೀನು ಬಿಲ್ಲೇ ಹಾಕಿಲ್ಲ, ಈ ಥರ ಸುಳ್ಳು ಹೇಳಿದ್ರೆ ಸಸ್ಪೆಂಡ್ ಮಾಡ್ತೀನಿ ಎಂದು ಎಚ್ಚರಿಕೆ ನೀಡಿದರು.

ಸಭೆಯಲ್ಲಿ ಸಚಿವ ಸಾ.ರಾ ಮಹೇಶ್ , ಜಿಲ್ಲಾಧಿಕಾರಿ ಅಭಿರಾಂ ಜೀ ಶಂಕರ್, ಜಿ.ಪಂ ಸಿಇಓ ಕೆ.ಜ್ಯೋತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Key words: minister-gt devegowda-Full Class -Officers – Progress- Review- Meeting – Mysore.