ಅಧಿಕಾರಿಗಳ ವಿರುದ್ಧ ಕಿಡಿ: ಇಂಜಿನಿಯರ್ ಹಾಗೂ ಟೆಂಡರ್ ದಾರ ಸಸ್ಪೆಂಡ್  ಗೆ  ಸ್ಥಳದಲ್ಲೇ ಖಡಕ್ ಆದೇಶ ಹೊರಡಿಸಿದ ಸಚಿವ ಜಿ.ಟಿ ದೇವೇಗೌಡ…

ಮೈಸೂರು,ಜು,3,2019(www.justkannada.in): ಶೌಚಾಲಯದ ಸ್ವಚ್ಛತೆ ಕಾಪಾಡದ ಹಿನ್ನೆಲೆ ಇಂಜಿನಿಯರ್ ಹಾಗೂ ಟೆಂಡರ್ ದಾರರ ವಿರುದ್ದ ಗರಂ ಆದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ ದೇವೇಗೌಡ, ಇಬ್ಬರನ್ನೂ ಸಸ್ಪೆಂಡ್  ಮಾಡುವಂತೆ ಸ್ಥಳದಲ್ಲೇ ಖಡಕ್ ಆದೇಶ ಹೊರಡಿಸಿದರು.

ಮೈಸೂರಿನ ಸಬರ್ಬ್ ಬಸ್ ನಿಲ್ದಾಣದ ಮುಂಭಾಗವಿರುವ ಶೌಚಾಲಯಕ್ಕೆ  ಜಿಲ್ಲಾ ಉಸ್ತುವಾರಿ ಸಚಿವ ಜಿಟಿ ದೇವೇಗೌಡ ಧಿಡೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಗಬ್ಬುನಾರುತ್ತಿದ್ದ  ಶೌಚಾಲಯ ಕಂಡು ಫುಲ್ ಗರಂ ಆದ ಸಚಿವ ಜಿ.ಟಿ ದೇವೇಗೌಡ, ಶೌಚಾಲಯ maintain  ಮಾಡ್ತಿರೋದು ಯಾರ್ರೀ ಯಾರ್ರೀ..??. ಡೈಲಿ ಮೇಂಟೈನ್ ಮಾಡೋದು ಯಾರು..?? ಯಾರ್ ಟೆಂಡರ್ ತಗೊಂಡಿರೋದು  ..? ಹೆಚ್ಚು ಜನ ಓಡಾಡೋ  ಜಾಗ ಇದು, ಇದನ್ನ ಸ್ವಚ್ಛವಾಗಿ  ಇಟ್ಕೋಳೋಕೆ  ಆಗಲ್ವಾ ..?? ಎಂದು ಅಧಿಕಾರಿಗಳ ವಿರುದ್ದ ಕಿಡಿಕಾರಿದರು.

ಹಾಗೆಯೇ ಇಂಜಿನಿಯರ್ ಯಾರು ಹಾಗೂ ಟೆಂಡರ್ ದಾರ  ಯಾರು..?? ಡಿಸಿ ಅವ್ರೆ ಇಂಜಿನಿಯರ್, ಟೆಂಡರ್  ಇಬ್ಬರನ್ನು ಸಸ್ಪೆಂಡ್ ಮಾಡ್ರಿ  ಎಂದು ಸ್ಥಳದಲ್ಲೇ ಇದ್ದ ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಗೆ ಸಚಿವ ಜಿ.ಟಿ ದೇವೇಗೌಡ ಖಡಕ್ ಸೂಚನೆ ನೀಡಿದರು.

Key words: Minister -GT Deve Gowda -order -on the spot – suspend-engineer – tender