ಕಾರಜೋಳ ನೀರಾವರಿ ಮಂತ್ರಿಯಾಗಲು ನಾಲಾಯಕ್- ಮಾಜಿ ಸಚಿವ ಎಂಬಿ ಪಾಟೀಲ್.

ವಿಜಯಪುರ,ಜನವರಿ,8,2022(www.justkannada.in):  ಗೋವಿಂದ ಕಾರಜೋಳ ನೀರಾವರಿ ಮಂತ್ರಿಯಾಗಲು ನಾಲಾಯಕ್. ಅವರಿಗೆ ಅಂತರಾಜ್ಯ  ವಿವಾದಗಳು ಗೊತ್ತಿಲ್ಲ ಎಂದು ಮಾಜಿ ಸಚಿವ ಎಂ.ಬಿ ಪಾಟೀಲ್ ಕಿಡಿಕಾರಿದ್ದಾರೆ.

ಮಾಧ್ಯಮಗಳ ಜತೆ ಇಂದು ಮಾತನಾಡಿದ ಮಾಜಿ ಸಚಿವ ಎಂ.ಬಿ ಪಾಟೀಲ್, ಮೇಕೆದಾಟು ಇನಿಷಿಯೇಟಿವ್ ತೆಗೆದುಕೊಂಡಿದ್ದು ನಾನೇ ಸಿದ್ಧರಾಮಯ್ಯ ಸರ್ಕಾರದಲ್ಲೇ ಯೋಜನೆ ಪ್ರಾರಂಭವಾಗಿದೆ. ಸಚಿವ ಗೋವಿಂದ ಕಾರಜೋಳ ಈಗ ಕ್ರೆಡಿಟ್ ತೆಗೆದುಕೊಳ್ಳಲು ಹೋಗಿದ್ದಾರೆ ಎಂದು ಟೀಕಿಸಿದರು.

ಗೋವಿಂದ ಕಾರಜೋಳ ನೀರಾವರಿ ಮಂತ್ರಿಯ ಆಗಲು ನಾಲಾಯಕ್.  ಬಿಜೆಪಿ ಸರ್ಕಾರದ್ದು ಮೂರ್ಖತನದ ಪರಮಾವಧಿ  . ಬಿಜೆಪಿ ಚಿಲ್ಲರೆ ರಾಜಕಾರಣ ಮಾಡುತ್ತಿದೆ ಎಂದು ಹರಿಹಾಯ್ದರು.

Key words: minister-govinda karjol-congress-leader-MB Patil