ಬೆಂಗಳೂರು,ಆಗಸ್ಟ್,30,2025 (www.justkannada.in): ಧರ್ಮಸ್ಥಳ ಪ್ರಕರಣವನ್ನು ಎನ್ ಐಎ ತನಿಖೆಗೆ ವಹಿಸುವಂತೆ ಬಿಜೆಪಿ ಆಗ್ರಹ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಎಸ್ ಐಟಿ ತನಿಖೆ ಸ್ವಾಗತಿಸಿದ್ದಾರೆ. ಈ ಸಂದರ್ಭದಲ್ಲಿ ಬೇರೆ ಸಂಸ್ಥೆಗೆ ತನಿಖೆಗೆ ವಹಿಸುವ ಅಗತ್ಯವಿಲ್ಲ ಎಫ್ ಎಸ್ ಎಲ್ ಗೆ ಈಗಾಗಲೇ ಒಂದಿಷ್ಟು ಸ್ಯಾಂಪಲ್ ನೀಡಲಾಗಿದೆ. ಅದರ ವರದಿ ಏನಿರುತ್ತೆ ಗೊತ್ತಿಲ್ಲ ನಾವು ಊಹಾಪೋಹ ಮಾಡಿ ಮಾತನಾಡಲು ಬರುವುದಿಲ್ಲ ಎಂದರು.
ವಿಪಕ್ಷಗಳು ಬೇಗ ತನಿಖೆ ಮುಗಿಸಿ ಎಂದರೆ ಆಗುವುದಿಲ್ಲ ಸಮಯ ನಿಗದಿ ಮಾಡಿ ತನಿಖೆ ಮಾಡಿ ಎಂದರೆ ಆಗುವುದಿಲ್ಲ ತನಿಖೆ ಬೇಗ ಮುಗಿಸಿ ಎಂದು ಎಸ್ ಐಟಿಗೆ ಹೇಳಲು ಆಗುವುದಿಲ್ಲ . ನಾವು ಎಸ್ ಐಟಿಗೆ ಯಾವುದೇ ನಿರ್ದೇಶನ ಕೊಡಲ್ಲ ಈ ಪ್ರಕರಣ ಎಲ್ಲಿವರೆಗೆ ಹೋಗುತ್ತೆ ಗೊತ್ತಿಲ್ಲ ತಾರ್ಕಿಕ ಅಂತ್ಯ ಆಗಬೇಕು ಅಲ್ಲಿವರೆಗೆ ತನಿಖೆ ಮಾಡತ್ತಾರೆ ಎಂದು ಪರಮೇಶ್ವರ್ ತಿಳಿಸಿದರು.
Key words: Dharmasthala case, No need, investigation, another agency, Minister G.Parameshwar