ಬೆಂಗಳೂರು, ಮೇ, 15,2025 (www.justkannada.in): ವಿವಿಧ ಕ್ಷೇತ್ರಗಳಲ್ಲಿ ಕೌಶಲ್ಯಪೂರ್ಣ ವೃತ್ತಿಪರರರು, ನರ್ಸ್ ಗಳ ಅಗತ್ಯವಿದೆ ಎಂದು ಬೆಂಗಳೂರಿನಲ್ಲಿರುವ ಜಪಾನ್‌ನ ಕಾನ್ಸುಲ್-ಜನರಲ್ ನಕೇನ್ ಸ್ಟಮೊ ಸ್ಪಷ್ಟಪಡಿಸಿದ್ದು, ಕರ್ನಾಟಕದಲ್ಲಿ ತಾಂತ್ರಿಕ ಮತ್ತು ವಿಶೇಷ ಕೋರ್ಸ್ ವಿದ್ಯಾರ್ಥಿಗಳ ಕೌಶಲ್ಯವನ್ನು ಹೆಚ್ಚಿಸುವ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ.
ವಿಕಾಸ ಸೌಧದಲ್ಲಿ ಬೆಂಗಳೂರಿನಲ್ಲಿರುವ ಜಪಾನ್‌ನ ಕಾನ್ಸುಲ್-ಜನರಲ್ ನಕೇನ್ ಸ್ಟಮೊ ಅವರೊಂದಿಗೆ ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್ ಸಭೆ ನಡೆಸಿದ ನಂತರ ಮಾಹಿತಿ ನೀಡಿದರು.
ವಿವಿಧ ಕ್ಷೇತ್ರಗಳಲ್ಲಿ ಕರ್ನಾಟಕದ ಕೌಶಲ್ಯಪೂರ್ಣ ವೃತ್ತಿಪರರ ಅಗತ್ಯವಿದೆ ಎಂದು ಜಪಾನ್ ಮನವಿ ಮಾಡಿದೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಮುಂದಾಗಿದ್ದೇವೆ. ಜಪಾನ್ ಜೊತೆ ಸಹಕಾರಕ್ಕೆ ಬದ್ಧ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.
ನಮ್ಮ ರಾಜ್ಯದಲ್ಲಿ ತಾಂತ್ರಿಕ ಮತ್ತು ವಿಶೇಷ ಕೋರ್ಸ್ ವಿದ್ಯಾರ್ಥಿಗಳ ಕೌಶಲ್ಯವನ್ನು ಹೆಚ್ಚಿಸುವ ತುರ್ತು ಅಗತ್ಯವಿದೆ ಎಂದು ಹೇಳಿದರು.
ನಮ್ಮ ಸರ್ಕಾರವು ಈಗಾಗಲೇ ಕೇಂದ್ರೀಕೃತ ಕೌಶಲ್ಯವರ್ಧನೆಯ ಮೂಲಕ ಐಟಿಐ ಮತ್ತು ಡಿಪ್ಲೊಮಾ ವಿದ್ಯಾರ್ಥಿಗಳ ಉದ್ಯೋಗ ಸಾಮರ್ಥ್ಯವನ್ನು ಹೆಚ್ಚಿಸಲು ಮುಂದಾಗಿದೆ. ಜಾಗತಿಕ ಉದ್ಯೋಗ ಅವಕಾಶಗಳ ಮೇಲೆ ಒತ್ತು ನೀಡುವ ಮೂಲಕ ಜಪಾನೀಸ್, ಜರ್ಮನ್ ಮತ್ತು ಇಂಗ್ಲಿಷ್ ಸೇರಿದಂತೆ ವಿದೇಶಿ ಭಾಷಾ ತರಬೇತಿಯನ್ನು ಪರಿಚಯಿಸುವ ಯೋಜನೆಯನ್ನು ಘೋಷಿಸಿದೆ ಎಂದರು.
ಇಲಾಖೆಯ ನಿಯೋಗವು ಶೀಘ್ರದಲ್ಲೇ ಜಪಾನ್‌ಗೆ ಭೇಟಿ ನೀಡಿ ಅದರ ಕಾರ್ಯಪಡೆಯ ಮಾದರಿಯನ್ನು ಅಧ್ಯಯನ ಮಾಡಲಿದೆ ಎಂದು ಸಚಿವ ಶರಣ್ ಪ್ರಕಾಶ್ ಪಾಟೀಲ್ ತಿಳಿಸಿದರು.
ಇದೇ ಸಂದರ್ಭದಲ್ಲಿ ನಕೇನ್ ಸ್ಟಮೊ ಮಾತನಾಡಿ, ಜಪಾನ್‌ನಲ್ಲಿ ಕಾರ್ಯಪಡೆಯ ಕೊರತೆ ಇದೆ. ವಿಶೇಷವಾಗಿ ಆರೋಗ್ಯ ರಕ್ಷಣೆ, ಐಟಿ ಮತ್ತು ತಾಂತ್ರಿಕ ಕ್ಷೇತ್ರದಲ್ಲಿ ಕೌಶಲ್ಯಗಾರರ ಅಗತ್ಯವಿದೆ. ರಾಜ್ಯದಿಂದ ಪ್ರತಿಭೆಗಳನ್ನು ನೇಮಿಸಿಕೊಳ್ಳಲು ಉತ್ಸುಕವಾಗಿದೆ ಎಂದು ತಿಳಿಸಿದರು.
“ಜಪಾನಲ್ಲಿ ಈಗ ವಯಸ್ಸಾದವರ ಸಂಖ್ಯೆ ಹೆಚ್ಚಾಗಿದೆ. ಜನಸಂಖ್ಯೆ ಕ್ಷೀಣಿಸುತ್ತಿದೆ. 2030 ರ ವೇಳೆಗೆ, ಐಟಿ ವಲಯಲ್ಲಿ 7,90,000 ವೃತ್ತಿಪರರ ಕೊರತೆಯನ್ನು ಎದುರಾಗುವ ನಿರೀಕ್ಷೆಯಿದೆ” ಎಂದು ಅವರು ಮಾಹಿತಿ ನೀಡಿದರು.
“ವೈಟ್-ಕಾಲರ್ ತಜ್ಞರ ಜೊತೆಗೆ, ಕೌಶಲ್ಯಪೂರ್ಣ ತಂತ್ರಜ್ಞರ ಅಗತ್ಯವಿದೆ. ದಾದಿಯರ ಅಗತ್ಯ ಹೆಚ್ಚುತ್ತಿದೆ ಎಂದು ಸ್ಟಮೊ ಹೇಳಿದರು.
ಬೆಂಗಳೂರಿನಲ್ಲಿ ಜಪಾನಿನ ಕಂಪನಿಗಳು ಸ್ಥಳೀಯ ನರ್ಸಿಂಗ್ ಪದವೀಧರರ ಸುಗಮ ಉದ್ಯೋಗಕ್ಕೆ ಅನುಕೂಲವಾಗುವಂತೆ ಸಿಎಸ್ ಆರ್ ಉಪಕ್ರಮಗಳ ಅಡಿಯಲ್ಲಿ ಜಪಾನೀಸ್ ಭಾಷೆ ಮತ್ತು ಕೌಶಲ್ಯ ತರಬೇತಿಯನ್ನು ನೀಡಲು ಸಿದ್ಧವಾಗಿವೆ ಎಂದು ಸ್ಟಮೊ ಸ್ಟಷ್ಟಪಡಿಸಿದರು.
ಕೈಗಾರಿಕಾ ಉತ್ಪಾದನೆ, ನಿರ್ಮಾಣ, ಹಡಗು ನಿರ್ಮಾಣ, ಯಂತ್ರೋಪಕರಣಗಳ ನಿರ್ವಹಣೆ, ಆಟೋ ದುರಸ್ತಿ, ವಾಯುಯಾನ, ಆತಿಥ್ಯ, ಸಾರಿಗೆ, ರೈಲ್ವೆ, ಕೃಷಿ, ಮೀನುಗಾರಿಕೆ, ಜಲಚರ ಸಾಕಣೆ, ಆಹಾರ ಸೇವೆಗಳು, ಅರಣ್ಯ ಮತ್ತು ಮರ ಸಂಸ್ಕರಣೆ ಮುಂತಾದ ಕ್ಷೇತ್ರಗಳಲ್ಲಿ ಬೇಡಿಕೆ ಇದೆ ಎಂದು ಕಾನ್ಸುಲ್-ಜನರಲ್ ವಿವರಿಸಿದರು.
“ಈ ನಿಟ್ಟಿನಲ್ಲಿ ಕರ್ನಾಟಕದೊಂದಿಗೆ ಜಪಾನ್ ಸಹಕರಿಸಲು ಸಿದ್ಧವಾಗಿದೆ. ಕಾರ್ಯಪಡೆಯ ಅಭಿವೃದ್ಧಿಯಲ್ಲಿ ಎಲ್ಲ ರೀತಿಯ ಬೆಂಬಲವನ್ನು ನೀಡಲಾಗುವುದು” ಎಂದು ನಕೇನ್ ಸ್ಟಮೊ ಸ್ಪಷ್ಟಪಡಿಸಿದರು.
ENGLISH SUMMARY..
Japan Eyes Karnataka’s Skilled Workforce to Bridge Skilled Professionals Shortage
Bengaluru, May 14: Highlighting a critical need for skilled professionals across sectors, Nakane Tsutomu, Consul-General of Japan in Bengaluru, emphasized the urgency of upskilling technical and specialty course students in Karnataka.
During a meeting with Karnataka’s Medical and Skill Development Minister Dr. Sharan Prakash Patil at Vikasa Soudha on Wednesday, Tsutomu revealed that Japan is facing a severe workforce shortage—particularly in healthcare, IT, and technical trades—and is keen on recruiting talent from the state.
“Japan is grappling with an aging and declining population. By 2030, the IT sector alone is expected to face a shortfall of 790,000 professionals,” he noted. “In addition to white-collar experts, there is a pressing demand for skilled blue-collar technicians.”
Tsutomu underscored a growing need for nurses and shared that Japanese companies in Bengaluru are prepared to offer Japanese language and skill training under CSR initiatives to facilitate smoother placement of local nursing graduates.
Minister Dr. Patil stated that the Karnataka government is already working to enhance the employability of ITI and diploma students through focused upskilling. He announced plans to introduce foreign language training—including Japanese, German, and English—with an emphasis on global placement opportunities. A delegation from the department will soon visit Japan to study its workforce model.
The Consul-General further outlined Japan’s demand across sectors such as industrial manufacturing, construction, shipbuilding, machinery maintenance, auto repair, aviation, hospitality, transportation, railways, agriculture, fisheries, aquaculture, food services, forestry, and wood processing.
“Japan is ready to collaborate with Karnataka to create a pipeline of skilled professionals,” he said, signaling a deeper Indo-Japanese cooperation in workforce development.
Key words: Japan, Karnataka, skilled, workforce, Minister, Dr. Sharan Prakash Patil