ಸಿಎಂ ಬದಲಿಸುವ ಕೆಟ್ಟ ಚಾಳಿ ಬಿಜೆಪಿಯದ್ದು: ಪ್ರತಾಪ್ ಸಿಂಹಗೆ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ತಿರುಗೇಟು

ಬೆಂಗಳೂರು, ಜೂನ್ 21, 2023 (www.justkannada.in): ಸಿದ್ದರಾಮಯ್ಯ ಪೂರ್ಣವಧಿ ಸಿಎಂ ಎಂದು ಘೋಷಣೆ ಮಾಡಲಿ ಎಂಬ ಪ್ರತಾಪ್ ಸಿಂಹ ಹೇಳಿಕೆಗೆ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ತಿರುಗೇಟು ನೀಡಿದ್ದಾರೆ.

ಅಧಿಕಾರ ಬಂತು ಎಂದರೆ 2-3 ಸಿಎಂ ಬದಲಿಸುವ ಚಾಳಿ ಬಿಜೆಪಿಯದ್ದು. ಸಿಎಂ ಬದಲಿಸುವ ಕೆಟ್ಟ ಚಾಳಿ ಇರುವ ಬಿಜೆಪಿಗೆ ಪೂರ್ಣವಧಿ ಸಿಎಂ ಎಂಬ ಪದ ಬಳಕೆಯ ನೈತಿಕತೆ ಇಲ್ಲ ಎಂದು ಪ್ರತಾಪ್ ಸಿಂಹ ವಿರುದ್ಧ ಹೆಚ್.ಸಿ.ಮಹದೇವಪ್ಪ ಗುಡುಗಿದ್ದಾರೆ.

ಅನಗತ್ಯವಾಗಿ ಕಾಂಗ್ರೆಸ್ ಪಕ್ಷದ ಬೆನ್ನು ಕೆರೆಯುವ ಕೆಲಸ ಪ್ರತಾಪ್ ಸಿಂಹ ಮಾಡುತ್ತಿದ್ದಾರೆ. ಕಾಂಗ್ರೆಸ್ ಮೇಲಿನ ಪ್ರೀತಿ ಬದಿಗಿಟ್ಟು ಬಿಜೆಪಿ ಪಕ್ಷ ನಿಷ್ಠೆ ವಹಿಸಲಿ. ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು ಸಚಿವ ಸಂಪುಟ ರಚಿಸಿದೆ. ಆದರೆ ಸೋಲಿನಿಂದ ಕಂಗಲಾಗಿರುವ ಬಿಜೆಪಿಗೆ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಸಾಧ್ಯವಾಗುತ್ತಿಲ್ಲ. ಇದು ಬಿಜೆಪಿಯ ದುರ್ಬಲತೆಯ ಸಂಕೇತ. ಪ್ರತಾಪ್ ಸಿಂಹ ಅಪ್ರಬುದ್ಧ ಮಾತುಗಳನ್ನಾಡುತ್ತಾರೆ ಎಂದು ಟ್ವಿಟ್ಟರ್ ನಲ್ಲಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಟಾಂಗ್ ನೀಡಿದ್ದಾರೆ.