ಬೆಂಗಳೂರು,ಜುಲೈ,31,2025 (www.justkannada.in): ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿದ್ದಾಗಿ ತಪ್ಪೊಪ್ಪಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ವರದಿ ಪೂರ್ಣ ಆಗುವವರೆಗೂ ಚರ್ಚೆ ಮಾಡಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಸದ್ಯಕ್ಕೆ ನಾವು ಈ ಬಗ್ಗೆ ಚರ್ಚೆ ಮಾಡಲ್ಲ ತನಿಖೆ ಪೂರ್ಣ ಆಗಲಿ. ಅದರಲ್ಲಿ ನಮಗೆ ಆಸಕ್ತಿ ಇಲ್ಲ. ಸತ್ಯ ಹೊರಬರೋದು ಅಷ್ಟೆ ಎಂದರು.
ರಾಜ್ಯದಲ್ಲಿ ಆಗಸ್ಟ್ ಅಂತ್ಯಕ್ಕೆ ಟೋಯಿಂಗ್ ಆರಂಭ ವಿಚಾರ ಕುರಿತು ಪ್ರತಿಕ್ರಿಯಿಸಿ ಪರಮೇಶ್ವರ್, ಗುತ್ತಿಗೆ ಕೊಡಲ್ಲ ಈ ಬಾರಿ ಇಲಾಖೆಯಿಂದಲೇ ಟೋಯಿಂಗ್ ಮಾಡಲಾಗುತ್ತದೆ. ರಸ್ತೆಯಲ್ಲಿ ನಿಲ್ಲಿಸುವ ವಾಹನಗಳ ಟೋಯಿಂಗ್ ಮಾಡಲಾಗುತ್ತದೆ. ಸಾರ್ವಜನಿಕರ ಜೊತೆಗೆ ಪೊಲೀಸರು ಮಾನವೀಯತೆಯಿಂದ ಶಾಂತಿ ರೀತಿಯಿಂದ ವರ್ತಿಸುವಂತೆ ಸೂಚನೆ ನೀಡಲಾಗುತ್ತದೆ ಎಂದು ತಿಳಿಸಿದರು.
Key words: Dharmasthala case, report, Home Minister, Dr. G. Parameshwar