ಹುಳುಕು ಮುಚ್ಚಿಕೊಳ್ಳಲು ವಿಪಕ್ಷದವರೇ ದಲಿತ ಸಿಎಂ ಕೂಗು ತಂದಿದ್ದಾರೆ-ಗೃಹ ಸಚಿವ ಡಾ.ಜಿ.ಪರಮೇಶ್ವರ್

ಬೆಂಗಳೂರು,ಫೆಬ್ರವರಿ,23,2026 (www.justkannada.in): ತಮ್ಮ ಹುಳುಕು ಮುಚ್ಚಿಕೊಳ್ಳಲು ವಿಪಕ್ಷದವರೇ ದಲಿತ ಸಿಎಂ ಕೂಗು ತಂದಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಆರೋಪಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಗೃಹ ಸಚಿವ ಡಾ.ಜಿ ಪರಮೇಶ್ವರ್, ನಮ್ಮಲ್ಲಿ ಸಿಎಂ ಆಡಳಿತ ಮಾಡುತ್ತಿಲ್ಲವಾ? ಆಡಳಿತ ನಡೆಯುತ್ತಿಲ್ಲವಾ?  ಸುಮ್ಮನೆ ದಲಿತ ಸಿಎಂ ವಿಚಾರ ತರುತ್ತಿರುವುದು ವಿಪಕ್ಷಗಳೇ.  ದಲಿತರನ್ನು ಸಿಎಂ ಮಾಡೋದು ಕಾಂಗ್ರೆಸ್ ಪಕ್ಷನೇ. ಇನ್ಯಾರು ಮಾಡುತ್ತಾರೆ?  ಯಾವಾಗ ದಲಿತ ಸಿಎಂ ಮಾಡಬೇಕೆಂದು ವರಿಷ್ಠರು ತೀರ್ಮಾನಿಸುತ್ತಾರೆ ಎಂದರು.

ಬಿಜೆಪಿ ಶಾಸಕ ಚಂದ್ರು ಲಮಾಣಿ ಮೇಲೆ ಲೋಕಾಯುಕ್ತ ದಾಳಿ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ್, ಲೋಕಾಯುಕ್ತ ಎಲ್ಲಾ ಮಾಹಿತಿ ಪಡೆದು ಟ್ರ್ಯಾಪ್ ಮಾಡುತ್ತಾರೆ ಎಲ್ಲವನ್ನೂ ನೋಡದೇ ಲೋಕಾಯುಕ್ತ ಪೊಲೀಸರು ರೇಡ್ ಮಾಡುತ್ತಾರಾ?  ಲೋಕಾಯುಕ್ತದವರು ಪರಿಶೀಲನೆ ಮಾಡಿ ಅವರ ಹಿನ್ನೆಲೆ ನೋಡಿ ಎಲ್ಲಾ ವಿದ್ಯಾನಮಾನವನ್ನು ನೋಡಿಕೊಂಡು ಟ್ರ್ಯಾಪ್ ಮಾಡುತ್ತಾರೆ.  ಪ್ರಕರಣ ಸಂಬಂಧ ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತಾರೆ ಎಂದರು.

Key words: opposition Party,  Dalit CM, Minister , Dr. G. Parameshwar