ಶಿವಮೊಗ್ಗ,ಮೇ,28,2025 (www.justkannada.in): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಟ್ಟ ವ್ಯವಸ್ಥೆ ನಿರ್ಮಾಣವಾಗೋಕೆ ಬಿಜೆಪಿ, ಸಂಘ ಪರಿವಾರದ ಸಂಘಟನೆಗಳೇ ಕಾರಣ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದರು.
ಶಿವಮೊಗ್ಗದಲ್ಲಿ ಇಂದು ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದುಷ್ಕರ್ಮಿಗಳು ಕೊಲೆ ಮಾಡಿರುವುದು ಬಹಳ ನೋವಿನ ಸಂಗತಿ. ಸರಣಿ ಹತ್ಯೆ ಆಗುತ್ತಿರುವುದು ಜಿಲ್ಲೆ ಹಾಗೂ ರಾಜ್ಯಕ್ಕೂ ಕೂಡ ಕೆಟ್ಟ ಹೆಸರು. ರಹೀಂ ಈಗಾಗಲೇ ಸಾವನ್ನಪ್ಪಿದ್ದಾರೆ. ಇನ್ನೊಬ್ಬರು ಗಾಯಗೊಂಡಿದ್ದಾರೆ. ಪೊಲೀಸರಿಗೆ ಪ್ರಾಥಮಿಕ ಸುಳಿವು ಸಿಕ್ಕಿದೆ. ಶೀಘ್ರದಲ್ಲೇ ಆರೋಪಿಗಳನ್ನ ಬಂಧಿಸ್ತಾರೆ. ವೈಷಮ್ಯ, ಸೇಡು ಘಟನೆಗೆ ಕಾರಣ ಎನ್ನುವುದು ಕಂಡುಬರುತ್ತಿದೆ. ಕೋಮುವಾದದ ಕೆಟ್ಟ ವಾತಾವರಣ ಅಲ್ಲಿ ನಿರ್ಮಾಣ ಆಗಿದೆ. ಅದರ ಫಲಶೃತಿಯೇ ಈ ಘಟನೆ. ಪೊಲೀಸರ ತನಿಖೆಯ ನಂತರವೇ ಎಲ್ಲವೂ ತಿಳಿಯಲಿದೆ ಎಂದರು.
ಅಮಾನವೀಯವಾಗಿ, ಬರ್ಬರವಾಗಿ ಹತ್ಯೆ ಮಾಡಿರುವುದು ಇಡೀ ಸಮಾಜಕ್ಕೆ ಕೆಟ್ಟ ಸಂದೇಶ. ಎಲ್ಲಾ ರೀತಿಯ ಕಟ್ಟೆಚ್ಚರವನ್ನು ಪೊಲೀಸರು ವಹಿಸಿದ್ದಾರೆ. ಪೂರ್ತಿ ತನಿಖೆಯಾದ ನಂತರ ಎಲ್ಲಾ ಹೇಳುತ್ತೇವೆ. ಬಿಜೆಪಿಯ ತರ ಪ್ರಚೋದನಾಕಾರಿಯಾಗಿ ಮಾತನಾಡಲ್ಲ. ಅ ತರ ಜನ ನಾವಲ್ಲ.ಅವರ ಬಾಯಿಗೆ ಲಂಗು ಲಗಾಮಿಲ್ಲ. ಬಿಜೆಪಿ ಹಾಗೂ ಸಂಘ ಪರಿವಾರದ ನಾಯಕರು ಶವ ಸಿಕ್ಕರೂ ಅದರ ಮೇಲೆ ರಾಜಕೀಯ ಮಾಡುತ್ತಾರೆ. ಅವರ ಬಂಡವಾಳನೇ ಅದು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಟ್ಟ ವ್ಯವಸ್ಥೆ ನಿರ್ಮಾಣ ಆಗೋಕೆ ಅವರು ಕೂಡ ಕಾರಣ. ಬಿಜೆಪಿ ಹಾಗೂ ಸಂಘ ಪರಿವಾರದ ಸಂಘಟನೆಗಳೇ ಕಾರಣ. ಅವರ ಹೇಳಿಕೆಗಳನ್ನ ನೋಡಿ, ಯಾವ ರೀತಿ ಮಾತನಾಡ್ತಾರೆ ಎಂದು. ಮುಸಲ್ಮಾನರು ಎಂದರೇ ಕೆಟ್ಟ ಅಭಿಪ್ರಾಯ ಇಟ್ಟುಕೊಂಡಿದ್ದಾರೆ. ವಿಷ, ಕೊಳಕು ತುಂಬಿದ ಮನಸುಗಳು. ತರ್ಕ, ನ್ಯಾಯ, ಮಾನವೀಯತೆ, ಮನುಷ್ಯತ್ವ ಯಾವುದು ಇಲ್ಲ. ಸುಹಾಸ್ ಶೆಟ್ಟಿ ಪ್ರಕರಣದಲ್ಲಿ ಎಲ್ಲರನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಎಲ್ಲರನ್ನು ಬಂಧಿಸ್ತೇವೆ. ಕಾನೂನು ಉಲ್ಲಂಘನೆ ಆದಾಗ ಕ್ರಮ ಆಗುತ್ತೆ. ಯಾರೇ ಹತ್ಯೆ ಆದರೂ ಧರ್ಮ, ಜಾತಿ ಪ್ರಶ್ನೆ ಬರಲ್ಲ, ತಪ್ಪು ಮಾಡಿದ್ರೇ ಶಿಕ್ಷೆ ಆಗುತ್ತೆ. ಸುಹಾಸ್ ಶೆಟ್ಟಿ ಕೂಡ ರೌಡಿ ಶೀಟರ್ ಆತನ ಮೇಲು ಕೇಸ್ ಇದ್ದಾವೆ. ನಮ್ಮಲ್ಲಿ ಭೇದ ಭಾವ ಇಲ್ಲ. ಕ್ರಮ ಆಗುತ್ತೇ ಎಂದು ದಿನೇಶ್ ಗುಂಡೂರಾವ್ ಹೇಳಿದರು.
ಸಮಾಜವನ್ನು ಒಡೆಯುವುದಕ್ಕೆ ಕೋಮುವಾದ ಕಾರಣವಾಗಿದೆ. ಕೋಮುವಾದದ ವಿರುದ್ದ ಕಾನೂನು ಹೋರಾಟ ಹಾಗೂ ಸಾಮಾಜಿಕವಾದ ಹೋರಾಟ ಮಾಡಬೇಕಾಗುತ್ತೆ. ಇಂದು ಮೃತನ ಅಂತ್ಯಕ್ರಿಯೆ ನಡೆಸಲಾಗುತ್ತದೆ. ನಂತರ ಅವರ ಮನೆಗೆ ಭೇಟಿ ನೀಡುವ, ಪರಿಹಾರ ನೀಡುವ ವಿಚಾರ ಮಾಡುತ್ತೇವೆ. ಪ್ರತಿಯೊಂದು ಮನೆಯ ಬಳಿ ಪೊಲೀಸರು ಇರಲು ಆಗೋದಿಲ್ಲ. ಪ್ರಚೋದನೆಯ ಭಾಷಣಗಳನ್ನು ಮೊನ್ನೆ ಮಾಡಿದ್ದಾರೆ. ಅಂತವರ ಮೇಲೆ ಎಫ್ಐಆರ್ ಆಗಿದೆ. ಸಂಘ ಪರಿವಾರದವರು ಹೆಚ್ಚಾಗಿ ಪ್ರಚೋದನಾಕಾರಿ ಭಾಷಣ ಮಾಡುತ್ತಿದ್ದಾರೆ. ಸಂಘಪರಿಹಾರದವರೇ ಹೆಚ್ಚಾಗಿ ಇಂತಹ ಪ್ರಕರಣದಲ್ಲಿ ಭಾಗಿಯಾಗುತ್ತಿದ್ದಾರೆ. ಸಮಾಜ ಮನಸ್ಥತಿ ಬದಲಾಗುವರೆ ಇವೆಲ್ಲ ಇರುತ್ತೆ. ಕಾನೂನಾತ್ಮಕವಾದ ಹೋರಾಟ ಹಾಗೂ ಪರಿವರ್ತನೆ ಮಾಡುವ ಕೆಲಸ ಮಾಡಲಾಗುತ್ತಿದೆ ಎಂದರು.
ರಾಜ್ಯದಲ್ಲಿ ಕೋವಿಡ್ ಪ್ರಕರಣ ಹೆಚ್ಚಳ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ದಿನೇಶ್ ಗುಂಡೂರಾವ್, ಕೋವಿಡ್ ಇದ್ದೇ ಇರುತ್ತದೆ ಅಂತಹ ದೊಡ್ಡ ಪರಿಣಾಮ ಬಿರುವುದಿಲ್ಲ ಎಂಬ ಮಾಹಿತಿ ಇದೆ. ಎಲ್ಲರೂ ಎಚ್ಚರಿಕೆಯಿಂದ ಇರಬೇಕು ಯಾರು ಸಹ ನಿರ್ಲಕ್ಷಿಸಬಾರದು. ಜನ ಇರೋ ಕಡೆ ಹೋದಾಗ ಕಡ್ಡಾಯವಾಗಿ ಮಾಸ್ಕ್ ಬಳಸುವಂತೆ ತಿಳಿಸಿದ್ದೇವೆ. ಉಸಿರಾಟದ ಸಮಸ್ಯೆ ಇದ್ದವರು ಕೊವೀಡ್ ಪರೀಕ್ಷೆ ಮಾಡಿಕೊಳ್ಳಬೇಕು. ಯಾರಿಗೆ ಜ್ವರ ಶೀತ ಬಂದಿದೆಯೋ ಅವರಿಗೆ ಶಾಲೆಗೆ ಕಳಿಸಬೇಡಿ ಎಂದಿದ್ದೇವೆ. ಸರ್ಕಾರಿ ಆಸ್ಪತ್ರೆಯಲ್ಲಿ ಎಲ್ಲಾ ಔಷಧ ಸಿಗುತ್ತದೆ.ನಮ್ಮ ವೈದ್ಯರು ಬರೆದು ಕೊಡುವ ಔಷಧ ನಮ್ಮ ಆಸ್ಪತ್ರೆಯಲ್ಲಿ ಸಿಗುತ್ತದೆ. ನಮ್ಮ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಜನ ಔಷಧಿ ಮಾರಾಟ ಆಗಬಾರದು. ಜನ ಔಷಧಿ ಕೇಂದ್ರದ ವಿರುದ್ದ ನಾವಿಲ್ಲ ಎಂದು ದಿನೇಶ್ ಗುಂಡುರಾವ್ ತಿಳಿಸಿದರು.
Key words: BJP, Sangh Parivar, responsible ,bad system,Minister ,Dinesh Gundu Rao